ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬೆಡ್‌ ಸಿಗದೇ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯ ಪರದಾಟ

Last Updated 3 ಮೇ 2021, 15:06 IST
ಅಕ್ಷರ ಗಾತ್ರ

ಕಲಬುರ್ಗಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭೀಮಬಾಳ ಗ್ರಾಮದ ವ್ಯಕ್ತಿಯ ಸಂಬಂಧಿಕರು ಸೋಮವಾರ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇದ್ದುದಕ್ಕೆ ಕಣ್ಣೀರು ಹಾಕಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ನಗರದ ಎಲ್ಲ ಆಸ್ಪತ್ರೆಗಳನ್ನು ಸುತ್ತಿ ನಗರದ ಜಿಮ್ಸ್ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆತಂದಿರುವ ಅವರ ಸಂಬಂಧಿಕರು ಗಾಳಿ ಬೀಸುತ್ತಿದ್ದಾರೆ. ‘ನನ್ನ ಅಣ್ಣನಿಗೆ ಉಸಿರಾಟದ ತೊಂದರೆ ಇದೆ. ಕಲಬುರ್ಗಿಯ ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಸಿಗುತ್ತಿಲ್ಲ. ಕಾಲಿಗೆ ಬೀಳ್ತೀವಿ. ಬೆಡ್ ಕೊಟ್ಟು ಅಣ್ಣನನ್ನು ಬದುಕಿಸಿ’ ಎಂದು ಅವರ ಸಹೋದರ ಬೇಡಿಕೊಳ್ಳುತ್ತಿದ್ದಾರೆ.

ಮತ್ತೊಬ್ಬ ವ್ಯಕ್ತಿಯನ್ನು ವ್ಹೀಲ್ಚೇರ್‌ ಮೇಲೆ ಜಿಮ್ಸ್‌ ಹೊರಗಡೆ ಕೂರಿಸಲಾಗಿದ್ದು, ಅವರ ಸಂಬಂಧಿಗಳು ಕರವಸ್ತ್ರದಿಂದ ಗಾಳಿ ಬೀಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಸಿಲಿಂಡರ್ ಸೌಲಭ್ಯದ ಹಾಸಿಗೆಗಳು ಲಭ್ಯವಿಲ್ಲ. ಹೀಗಾಗಿ ನಿತ್ಯ ನೂರಾರು ರೋಗಿಗಳು ಬೆಡ್ ಸಿಗದೇ ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT