ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹಕ್ಕೆ ತುಂಬಿದ ಕಾಗಿಣಾ ನದಿ: ದಂಡೋತಿ ಸೇತುವೆ ಮುಳುಗಡೆ ಭೀತಿ

Last Updated 3 ಆಗಸ್ಟ್ 2022, 8:24 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ): ಧಾರಕಾರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಪ್ರವಾಹ ಉಕ್ಕಿ ಬಂದು ಬುಧವಾರ ಬೆಳಗ್ಗಿಯಿಂದ ತುಂಬಿ ಹರಿಯುತ್ತಿದೆ.

ಬೆಳಿಗ್ಗೆಯಿಂದ ನದಿಯಲ್ಲಿ ಪ್ರವಾಹ ಏರುಗತಿಯಲ್ಲಿದೆ. ನಿರಂತರ ಮಳೆಯಿಂದ ಪ್ರವಾಹ ಹೆಚ್ಚಾಗಿ ದಂಡೋತಿ ಸಮೀಪ ನದಿಗೆ ಇರುವ ಸೇತುವೆ ಮುಳುಗಡೆಯಾಗುವ ಭೀತಿ ಜನರನ್ನು ಕಾಡುತ್ತಿದೆ.

ನದಿಯ ಮೇಲ್ಭಾಗದ ಸೇಡಂ, ಚಿಂಚೋಳಿ ತಾಲ್ಲೂಕುಗಳು ಹಾಗೂ ನೆರೆಯ ರಾಜ್ಯ ತೆಲಂಗಾಣದಲ್ಲಿ ಮಳೆಯಾದರೆ ಕಾಗಿಣಾ ನದಿಗೆ ಪ್ರವಾಹ ಹೆಚ್ಚಾಗುತ್ತದೆ. ಅದೇ ರೀತಿ ಕಾಳಗಿ, ಕಮಲಾಪುರ ಮತ್ತು ಆಳಂದ ತಾಲ್ಲೂಕುಗಳಲ್ಲಿ ಮಳೆಯಾದರೂ ಬೆಣ್ಣೆತೊರಾ ನದಿಗೆ ಪ್ರವಾಹ ಬಂದು ಅದು ಮಳಖೇಡ ಸಮೀಪ ಕಾಗಿಣಾ ನದಿಗೆ ಸೇರಿಕೊಂಡು ಕಾಗಿಣಾ ತುಂಬಿ ಹರಿಯುತ್ತದೆ.

ಚಿಂಚೋಳಿ ತಾಲ್ಲೂಕಿನ ಜಲಾಶಯಗಳು ಮತ್ತು ಕಾಳಗಿ ತಾಲ್ಲೂಕಿನ ಬಡಣ್ಣೆತೊರಾ ಜಲಾಶಯ ತುಂಬಿದಾಗ ನೀರು ಹೊರಗೆ ಬಿಟ್ಟರೆ ಕಾಗಿಣಾ ನದಿಗೆ ಪ್ರವಾಹ ತುಂಬಿ ಹರಿಯುತ್ತದೆ.

ಪ್ರವಾಹ ಹೆಚ್ಚಾಗುತ್ತಿದ್ದರೆ ದಂಡೋತಿ ಸಮೀಪದ ಕಾಗಿಣಾ ನದಿಯ ಸೇತುವೆ ಮುಗಡೆಯಾಗಿ ಈ ಮಾರ್ಗದ ಸಾರಿಗೆ ಸಂಚಾರಕ್ಕೆ ಸಂಕಟ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT