ಭಾನುವಾರ, ಆಗಸ್ಟ್ 1, 2021
27 °C

ಕಲಬುರ್ಗಿ: ಮನೆ ಕಳವು ಮಾಡುತ್ತಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಅನ್ನಪೂರ್ಣೇಶ್ವರಿ, ಭಾಗ್ಯ ನಗರ ಕಾಲೊನಿಗಳಲ್ಲಿ ಮನೆ ಕಳವು ಮಾಡಿದ್ದ ಮಹಾರಾಷ್ಟ್ರದ ಯುವಕನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪರಬಾನಿ ಜಿಲ್ಲೆಯ ತುರುತ್ತರಿ ಖಯ್ಯುಮ ಅಲಿಯಾಸ್ ನಯ್ಯುಮ್ ಬೇಗ್ ಬಂಧಿತ ಆರೋಪಿ. ಆತನಿಂದ ₹ 3.10 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ನೃಪತುಂಗ ಕಾಲೊನಿಯಲ್ಲಿ ಸಂಶಯಾಸ್ಪದವಾಗಿ ಕೈಯಲ್ಲಿ ರಾಡು ಹಿಡಿದು ತಿರುಗಾಡುತ್ತಿದ್ದಾಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೊಗರಿ ಕಳವು ಆರೋಪಿ ಬಂಧನ

ಕಲಬುರ್ಗಿ: ನಗರದ ಹೊರವಲಯ ನಂದೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‍ಮಿಲ್‍ಗಳಿಂದ ತೊಗರಿ ಹಾಗೂ ತೊಗರಿ ಬೇಳೆ ಕಳ್ಳತನ ಮಾಡುತ್ತಿದ್ದ ಕುಖ್ಯಾತನನ್ನು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿತ್ತಾಪುರ ತಾಲೂಕಿನ ಹೇರೂರ (ಕೆ) ಗ್ರಾಮದ ವಾಹನ ಚಾಲಕ ರಮೇಶ ನಾಟೀಕಾರ (19) ಎಂಬಾತನನ್ನು ಬಂಧಿಸಲಾಗಿದೆ. ಈತ ಕಳ್ಳತನ ಮಾಡಿದ್ದ 5 ಪ್ರಕರಣಗಳಲ್ಲಿ ಸಿಕ್ಕಿರುವ ಅಂದಾಜು ₹ 1.63 ಲಕ್ಷ ಮೌಲ್ಯದ ತೊಗರಿ ಹಾಗೂ ತೊಗರಿ ಬೇಳೆ ವಶಪಡಿಸಿಕೊಳ್ಳಲಾಗಿದೆ.

ವಿ.ವಿ. ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ, ಪೊಲೀಸ್ ಸಿಬ್ಬಂದಿಯಾದ ಲಿಂಬಾಜಿ ರಾಠೋಡ, ರಾಜು ಟಿಕಾಳೆ, ಸಂಜುಕುಮಾರ, ಅರವಿಂದ, ಸುಲ್ತಾನ, ಶಶಿಕಾಂತ, ಪ್ರೀತಮ್, ಈರಣ್ಣ, ಸುರೇಶ ದಾಳಿಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು