ಕಲಬುರಗಿ: ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆಯ ಚಿತ್ತಾಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪಥಸಂಚಲನಕ್ಕೆ ಕೊನೆಗೂ ‘ಮುಹೂರ್ತ’ ನಿಗದಿಯಾಗಿದೆ. ‘ಅನುಮತಿ’ಗೆ ಸಂಬಂಧಿಸಿದಂತೆ ಒಂದು ತಿಂಗಳ ‘ಹಗ್ಗ ಜಗ್ಗಾಟ’ಕ್ಕೆ ಕೊನೆಗೂ ತೆರೆ ಬಿದ್ದಿದೆ.

ನವೆಂಬರ್ 16ರ (ಭಾನುವಾರ) ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರವರೆಗೆ ಗಣವೇಷಧಾರಿಗಳ ಪಥಸಂಚಲನ, ಸಭೆ ನಡೆಸಲು ಆರ್ಎಸ್ಎಸ್ಗೆ ‘ಹೈಕೋರ್ಟ್’ ಅಂಗಳದಲ್ಲಿ ಗುರುವಾರ ಷರತ್ತುಬದ್ಧ ಅನುಮತಿ ದೊರೆತಿದೆ.

‘ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್ಎಸ್ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕು’ ಎಂದು ಮುಖ್ಯಮಂತ್ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅ.4ರಂದು ಪತ್ರ ಬರೆದಿದ್ದರು. ಅದನ್ನು ಉಲ್ಲೇಖಿಸಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

ಬಳಿಕ ಸಚಿವ ಪ್ರಿಯಾಂಕ್ ಬರೆದ ಪತ್ರಕ್ಕೆ ಬಿಜೆಪಿ ಸೇರಿದಂತೆ ಬಲಪಂಥೀಯರಿಂದ ಟೀಕೆಗಳು ವ್ಯಕ್ತವಾಗಿದ್ದವು. ಕೆಲವರು ವೈಯಕ್ತಿಕ ನಿಂದನೆಗೂ ಇಳಿದಿದ್ದರು. ಪ್ರಿಯಾಂಕ್ ಅವರಿಗೆ ದೂರವಾಣಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿದ್ದ. ಪ್ರಿಯಾಂಕ್ ಹಾಗೂ ಆರ್ಎಸ್ಎಸ್ ಪರ–ವಿರುದ್ಧ ಆರೋಪ–ಪ್ರತ್ಯಾರೋಪಗಳು ನಡೆದಿದ್ದವು.

ಈ ನಡುವೆಯೇ ಸಚಿವ ಪ್ರಿಯಾಂಕ್ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್ಎಸ್ಎಸ್ ಶತಾಬ್ದಿ ಅಂಗವಾಗಿ ಅಕ್ಟೋಬರ್ 19ರಂದು ಪಥಸಂಚಲನ ನಡೆಸಲು ಸಂಘದ ಚಿತ್ತಾಪುರ ಘಟಕವು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಇದರಿಂದ ಕೆರಳಿದ ಸಚಿವರ ಅಭಿಮಾನಿಗಳು, ಕೆಲ ಸಂಘಟನೆಯವರು ಆರ್ಎಸ್ಎಸ್ ಅನುಮತಿ ಕೋರಿದ ದಿನವೇ ಪರ್ಯಾಯವಾಗಿ ಮೆರವಣಿಗೆ ನಡೆಸಲು ತಮಗೂ ಅವಕಾಶ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಕಾನೂನು ಸುವ್ಯವಸ್ಥೆಯ ಕಾರಣಕ್ಕೆ ಚಿತ್ತಾಪುರ ತಹಶೀಲ್ದಾರ್ ಎಲ್ಲರಿಗೂ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ, ಚಿಂಚೋಳಿಯ ಅಶೋಕ ಪಾಟೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಭಾನುವಾರ (ಅ.19) ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್, ‘ಪರ್ಯಾಯ ದಿನ ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಕೇಳಿದ್ದರು. ‘ಅದಕ್ಕಾಗಿ ಇಂದೇ ಹೊಸದಾಗಿ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿದ್ದರು. ಅಂದು ಭಾನುವಾರ ಆಗಿದ್ದ ಕಾರಣ ಆರ್ಎಸ್ಎಸ್ ಜಿಲ್ಲಾಧಿಕಾರಿ ನಿವಾಸಕ್ಕೇ ತೆರಳಿ ಲಿಖಿತ ಮನವಿ ಸಲ್ಲಿಕೆಗೆ ಪ್ರಯತ್ನಿಸಿತ್ತು. ಸಾಧ್ಯವಾಗದೇ ವಾಟ್ಸ್ಆ್ಯಪ್ ಹಾಗೂ ಇ–ಮೇಲ್ ಮೂಲಕ ಮನವಿ ಸಲ್ಲಿಸಿತ್ತು. ಬಳಿಕ ಅ.20 ರಂದು ಜಿಲ್ಲಾಧಿಕಾರಿ ಅವರಿಗೆ ಲಿಖಿತ ಮನವಿ ಸಲ್ಲಿಸಿತ್ತು.

ವಾದ–ಪ್ರತಿವಾದ, ಎರಡು ಸುತ್ತಿನ ಶಾಂತಿಸಭೆಯ ಬಳಿಕ ಅಂತಿಮವಾಗಿ ನ.16ರಂದು ಪಥಸಂಚಲನಕ್ಕೆ ಇದೀಗ ಆರ್ಎಸ್ಎಸ್ಗೆ ಅವಕಾಶ ಸಿಕ್ಕಿದೆ.

ನ.16ರಂದು ಪಥಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅದಕ್ಕೆ ಹೈಕೋರ್ಟ್ ಮುದ್ರೆಯೊತ್ತಿದೆ. ಇದು ನಮಗೆ ಖುಷಿ ತಂದಿದೆ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಪಥಸಂಚಲನ ನಡೆಸುತ್ತೇವೆ
ಅಶೋಕ ಪಾಟೀಲ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಅರ್ಜಿದಾರ

ಶಾಂತಿಸಭೆ ಫಲಪ್ರದವಾಗಿ ಜಿಲ್ಲಾಡಳಿತ ಪಥಸಂಚಲನಕ್ಕೆ ನಮಗೆ ಅವಕಾಶ ಕಲ್ಪಿಸಿದೆ. ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಬದ್ಧವಾಗಿ ಅರ್ಜಿದಾರರು ಗಣವೇಷಧಾರಿಗಳ ಪಥಸಂಚಲನ ನಡೆಸಲಿದ್ದಾರೆ
ಅರುಣ ಶ್ಯಾಮ್ ಅರ್ಜಿದಾರ ಪರ ಹಿರಿಯ ವಕೀಲ

ಹಗ್ಗ ಜಗ್ಗಾಟದ ಹೆಜ್ಜೆ ಗುರುತು...

l ಅ.13: ಚಿತ್ತಾಪುರದಲ್ಲಿ ಗಣವೇಷಧಾರಿಗಳ ಪಥಸಂಚಲನಕ್ಕೆ ಅನುಮತಿ ಕೋರಿ ಆರ್ಎಸ್ಎಸ್ ಮನವಿ ಸಲ್ಲಿಕೆ

l ಅ.17: ಮೆರವಣಿಗೆಗೆ ಅನುಮತಿ ಕೋರಿದ ಭೀಮ್ ಆರ್ಮಿ

l ಅ.18: ಮೆರವಣಿಗೆಗೆ ಅವಕಾಶ ಕೋರಿ ಭಾರತೀಯ ದಲಿತ ಪ್ಯಾಂಥರ್ ಅರ್ಜಿ

l ಅ.18ರ ರಾತ್ರಿ: ಎಲ್ಲರಿಗೂ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ

l ಅ.19ರ ಬೆಳಿಗ್ಗೆ: ತಹಶೀಲ್ದಾರ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ. ಭಾನುವಾರ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್. ಹೊಸದಾಗಿ ಅರ್ಜಿ ಸಲ್ಲಿಕೆಗೆ ಸೂಚಿಸಿ, ವಿಚಾರಣೆ l ಅ.24ಕ್ಕೆ ಮುಂದೂಡಿಕೆ.

l ಅ.19ರ ಸಂಜೆ: ಡಿ.ಸಿ ಸರ್ಕಾರಿ ನಿವಾಸಕ್ಕೆ ತೆರಳಿ ಖುದ್ದು ಅರ್ಜಿ ಸಲ್ಲಿಕೆಗೆ ಯತ್ನ. ಬಳಿಕ ವಾಟ್ಸ್ಆ್ಯಪ್, ಇ–ಮೇಲ್ನಲ್ಲಿ ಮನವಿ ಅರ್ಜಿ ರವಾನೆ

l ಅ.20: ಜಿಲ್ಲಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ ಆರ್ಎಸ್ಎಸ್.

l ಅ.20–23: ‘ಪಥ ಸಂಚಲನ’ದ ಮೂಲಕ ‘ಶಕ್ತಿ’ ಪ್ರದರ್ಶಿಸಲು ಪೈಪೋಟಿಗೆ ಬಿದ್ದ ಸಂಘಟನೆಗಳು. ತಮಗೂ ಮೆರವಣಿಗೆ/ ಪ್ರಾರ್ಥನಾ ನಡಿಗೆ/ ಪ್ರತಿಭಟನೆಗೆ ಅವಕಾಶ ನೀಡುವಂತೆ ಕೋರಿ ಹಲವು ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

l ಅ.24: ಅರ್ಜಿ ವಿಚಾರಣೆ ಮುಂದುವರಿಸಿದ ಹೈಕೋರ್ಟ್. ಹಲವು ಸಂಘಟನೆಗಳು ಒಂದೇ ದಿನ ಪಥಸಂಚಲನ/ಜಾಥಾಕ್ಕೆ ಅವಕಾಶ ಕೋರಿದ್ದರಿಂದ ಅರ್ಜಿಗಳ ಇತ್ಯರ್ಥಕ್ಕೆ ಅವಕಾಶ ಕೋರಿದ ಸರ್ಕಾರ. ಅ.28ಕ್ಕೆ ಶಾಂತಿಸಭೆ ನಡೆಸಲು ಸೂಚಿಸಿದ್ದ ಹೈಕೋರ್ಟ್, ವಿಚಾರಣೆ ಅ.30ಕ್ಕೆ ಮುಂದೂಡಿಕೆ.

l ಅ.28: ಆರ್ಎಸ್ಎಸ್ ಸೇರಿದಂತೆ ಇತರ ಅರ್ಜಿದಾರ ಸಂಘಟನೆಗಳ ತಲಾ ಮೂವರು ಸದಸ್ಯರೊಂದಿಗೆ ಜಿಲ್ಲಾಡಳಿತದಿಂದ ಶಾಂತಿಸಭೆ. ಸಭೆಗೆ ಅರ್ಜಿದಾರರೇ ಗೈರು. ‘ಶಾಂತಿ ಸಭೆ’ಯಲ್ಲಿ ಮೂಡದ ಒಮ್ಮತ. ಸಭೆಯ ಕೊನೆಯಲ್ಲಿ ‘ಸಂಘರ್ಷಮಯ’ ಸನ್ನಿವೇಶ.

l ಅ.30: ವಿಚಾರಣೆ ಮುಂದುವರಿಸಿದ ಹೈಕೋರ್ಟ್. ಶಾಂತಿಸಭೆಯಲ್ಲಿ ಅರ್ಜಿದಾರ ಗೈರಿಗೆ ಆಕ್ಷೇಪ. ಇನ್ನೊಂದು ಸುತ್ತಿನ ಶಾಂತಿಸಭೆಗೆ ಸೂಚನೆ. ವಿಚಾರಣೆ l ನ.7ಕ್ಕೆ ಮುಂದೂಡಿಕೆ.

l ನ.5: ಬೆಂಗಳೂರಿನಲ್ಲಿ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ನೇತೃತ್ವದಲ್ಲಿ 2ನೇ ಸುತ್ತಿನ ಶಾಂತಿಸಭೆ. ಆರ್ಎಸ್ಎಸ್ ಪರ ಅರ್ಜಿದಾರರು, ವಕೀಲರು, ಜಿಲ್ಲಾಡಳಿತದ ಅಧಿಕಾರಿಗಳು ಭಾಗಿ.

l ನ.7: ಮತ್ತೆ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್. ಆರ್ಎಸ್ಎಸ್ಗೆ ದಿನ–ಸಮಯ ನಿಗದಿಗೆ ವಾರದ ಸಮಯಾವಕಾಶ ಕೋರಿದ ಸರ್ಕಾರ. ವಿಚಾರಣೆ ನ.13ಕ್ಕೆ ಮುಂದೂಡಿಕೆ.

l ನ.13: ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್. ‘ಆರ್ಎಸ್ಎಸ್ ಪಥಸಂಚಲನಕ್ಕೆ ನ.16ರಂದು ಮ.3ರಿಂದ 5.30ರ ತನಕ ಷರತು ಬದ್ಧ ಅವಕಾಶ ನೀಡಲಾಗಿದೆ’ ಎಂದ ಸರ್ಕಾರ. ತಿಂಗಳ ಕಾಲದ ಹಗ್ಗಜಗ್ಗಾಟಕ್ಕೆ ತೆರೆ.

ಉಳಿದ ಸಂಘಟನೆಗಳ ಸಭೆ ಇಂದು

ಆರ್ಎಸ್ಎಸ್ ಪಥಸಂಚಲನಕ್ಕೆ ಪರ್ಯಾಯವಾಗಿ ಪಥಸಂಚಲನ–ಜಾಥಾ ನಡೆಸಲು ಪೈಪೋಟಿಗೆ ಬಿದ್ದು ಮನವಿ ಸಲ್ಲಿಸಿದ್ದ ಸಂಘಟನೆಗಳು ತಮ್ಮ ಮುಂದಿನ ನಡೆ ತೀರ್ಮಾನಿಸಲು ಶುಕ್ರವಾರ ಸಭೆ ನಡೆಸಲು ನಿರ್ಧರಿಸಿವೆ.

‘ಹೈಕೋರ್ಟ್ ಸಮ್ಮುಖದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಸ್ವಾಗತಾರ್ಹ. ನ.2ರಂದು ಪಥಸಂಚಲನಕ್ಕೆ ನಾವೂ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಕೋರಿದ್ದೆವು. ಆದರೆ, ಈತನಕ ಅವಕಾಶ ಸಿಕ್ಕಿಲ್ಲ. ಶುಕ್ರವಾರ ದಲಿತಪರ ಸಂಘಟನೆಗಳ ಸಭೆ ನಡೆಸಿ, ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಭೀಮ್ ಆರ್ಮಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಸಂತೋಷ ಪಾಳಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಲ್ಲ ಅರ್ಜಿದಾರರ ಸಂಘಟನೆಗಳ ಮುಖಂಡರು ಶುಕ್ರವಾರ ಸಭೆ ನಡೆಸಿ ಮುಂದಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ವಿವಿಧ ಸಂಘಟನೆಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ’ ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.