ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: 5 ಸಾವಿರ ಕಿ.ಮೀ ಪ್ರಯಾಣ ಆರಂಭಿಸಿದ ಸದಾಶಿವ ಸ್ವಾಮೀಜಿ

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ, 48 ತಾಲ್ಲೂಕುಗಳಲ್ಲಿ ಸಂಚಾರ
Published : 23 ಆಗಸ್ಟ್ 2024, 6:52 IST
Last Updated : 23 ಆಗಸ್ಟ್ 2024, 6:52 IST
ಫಾಲೋ ಮಾಡಿ
Comments

ಸೇಡಂ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಮಹೋತ್ಸವ ಮತ್ತು 7ನೇ ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ಸಿಗಾಗಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಅವರು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸುಮಾರು 5 ಸಾವಿರ ಕಿ.ಮೀ. ಸಂಚಾರಕ್ಕೆ ಪಯಣ ಆರಂಭಿಸಿದರು.

‘ತಾಲ್ಲೂಕಿನ ಕೊಂಕನಳ್ಳಿ-ಬೀರನಳ್ಳಿ ಗ್ರಾಮಗಳ ಸೀಮೆಯಲ್ಲಿ 2025ರ ಜನವರಿ 26ರಿಂದ ಫೆಬ್ರುವರಿ 6ವರೆಗೆ 9 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಈ ಇತಿಹಾಸ ಸೃಷ್ಟಿಸಲಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯ ತಯಾರಿಗಳು ನಡೆದಿದ್ದು, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ, 48 ತಾಲ್ಲೂಕುಗಳಲ್ಲಿ ಸಂಚಾರವನ್ನು ಸ್ವಾಮೀಜಿ ಕೈಗೊಂಡು 55 ಸ್ಥಳಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಯಾದಗಿರಿ ಜಿಲ್ಲೆಯ ಗುರಮಠಕಲ್‌ ತಾಲ್ಲೂಕು ಖಾಸಾ ಮಠದಿಂದ ಆಗಸ್ಟ್‌ 22 ರಂದು ಆರಂಭಗೊಂಡಿತು. ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ಕಲಬುರಗಿ, ಬೀದರ್ ನಂತರ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಚಿತ್ತಾಪುರದ ಮೂಲಕ ಸೆಪ್ಟೆಂಬರ್ 11 ರಂದು ಸೇಡಂ ತಲುಪಲಿದ್ದಾರೆ. ನಿತ್ಯ ಒಂದು ತಾಲ್ಲೂಕಿನಲ್ಲಿ ಎರಡರಿಂದ ಮೂರು ಕಡೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ವಿವಿಧ ಮಠಗಳ ಮಠಾಧೀಶರು, ಮಾತೆಯರು, ಸಾರ್ವಜನಿಕರು ಆಗಮಿಸುವಂತೆ ಮನವಿ ಮಾಡಲಿದ್ದಾರೆ’ ಎಂದು ಸಂಸ್ಥೆಯ ಸದಸ್ಯರು ಮಾಹಿತಿ ನೀಡಿದರು.

ಸೇಡಂನಲ್ಲಿ ವಿಶೇಷ ಪೂಜೆ: ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಸನ್ನಿಧಿಗೆ ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಿದರು. ನಂತರ ‘ಕಲ್ಯಾಣ ಕರ್ನಾಟಕ ವಿಕಾಸ ಪಥ’ದ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು. ವಾಹನಕ್ಕೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಶುಭಕೋರಿದರು.

ಸಿದ್ದಪ್ಪ ತಳ್ಳಳ್ಳಿ, ಚನ್ನಬಸ್ಸಪ್ಪ ಗವಿ, ವಿಶ್ವನಾಥ ಕೋರಿ, ಬಸವರಾಜ ಹಲಚೇರಿ, ಭಗವಂತರಾವ ಪಾಟೀಲ, ಶೀಲಾ ನಿರ್ಣಿ ಸೇರಿದಂತೆ ವಿವಿಧ ಪ್ರಕಲ್ಪಗಳ ಮುಖ್ಯಸ್ಥರು ಇದ್ದು ವಿಕಾಸ ಪಥಕ್ಕೆ ಶುಭ ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT