ಸೈದಾಪುರ: ‘ಹದಿಹರೆಯದವರಿಗೆ ಪೌಷ್ಟಿಕ ಆಹಾರ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಸರಿಯಾದ ತಿಳಿವಳಿಕೆ ಅತ್ಯಗತ್ಯ’ ಎಂದು ವೈದ್ಯಾಧಿಕಾರಿ ಡಾ.ಸುಷ್ಮಾ ಅಭಿಪ್ರಾಯಪಟ್ಟರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ನೇಹ ಕ್ಲಿನಿಕ್, ಆರ್.ಕೆ.ಎಸ್.ಕೆ, ಕಾರ್ಯಕ್ರಮ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹದಿಹರೆಯದವರು ದೈಹಿಕ, ಮಾನಸಿಕ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಮುಟ್ಟಿನ ಬಗ್ಗೆ ಮೂಢನಂಬಿಕೆ ಹೊಂದಿರುವ ಗ್ರಾಮೀಣ ಪ್ರದೇಶದ ಕಿಶೋರಿಯರು ಆಪ್ತ ಸಮಾಲೋಚನಾ ಕೇಂದ್ರದಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಸ್ವಚ್ಛ ಹಾಗೂ ಸುರಕ್ಷಿತ ನೈರ್ಮಲ್ಯವಾಗಿರದಿದ್ದರೆ ಗರ್ಭ ಕ್ಯಾನ್ಸರ್ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಹದಿಹರೆಯದವರ ಮಾನಸಿಕ, ಲೈಂಗಿಕ ಮತ್ತು ಪೋಷಣೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆರೋಗ್ಯಕರ ವಾತಾವರಣ ಕಲ್ಪಿಸುವುದು ಪೋಷಕರ ಪಾತ್ರ ಮುಖ್ಯವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಹದಿಹರೆಯದವರಿಗೆ ಸಾನಿಟರಿ, ನ್ಯಾಪಕಿನ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ.ಅಶ್ವಿನಿ, ಆರ್.ಕೆ.ಎಸ್.ಕೆ ಸಮಾಲೋಚಕ ಶಿವಶಂಕರ ರೆಡ್ಡಿ, ಆರೋಗ್ಯ ಸಹಾಯಕಿ ಕಸ್ತೂರಿ, ಆರೋಗ್ಯ ಸಿಬ್ಬಂದಿ ಗೀತಾ, ಶಿಭಾ, ನಿರ್ಮಲಾ, ಮೀನಾಕ್ಷಿ, ಅನಿತಾ, ಪ್ರೀತಿ ಪಾಟೀಲ್, ಆಶಾ ಕಾರ್ಯಕರ್ತೆಯರಾದ ಸುಭದ್ರಾ, ಸೂಗಮ್ಮ, ಮಣ್ಯಮ್ಮ, ನರಸಮ್ಮ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-30-1721879751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.