ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಕುಲದ ದಾರಿದೀಪ: ಪ್ರೊ.ಎಸ್. ಶಾಂತಾನಾಯ್ಕ್

ವಿವಿಧೆಡೆ ಬಂಜಾರ ಕುಲಗುರು ಸಂತ ಸೇವಾಲಾಲ ಜಯಂತಿ ಆಚರಣೆ
Last Updated 16 ಫೆಬ್ರುವರಿ 2021, 3:07 IST
ಅಕ್ಷರ ಗಾತ್ರ

ಕಲಬುರ್ಗಿ: ಕರ್ನಾಟಕದಲ್ಲೇ ಜನಿಸಿ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಸಂಚರಿಸಿ ತಮ್ಮ ಅನುಯಾಯಿಗಳಿಗೆ ಬದುಕಿನ ಮಾರ್ಗ ತಿಳಿಸಿಕೊಟ್ಟ ಸಂತ ಸೇವಾಲಾಲರು ಬಂಜಾರ ಕುಲದ ದಾರಿದೀಪವಾಗಿದ್ದಾರೆ ಎಂದು ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಪ್ರೊ. ಎಸ್. ಶಾಂತಾನಾಯ್ಕ್ ತಿಳಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಂತ ಸೇವಾಲಾಲ ಮಹಾರಾಜರ 282ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ’ಸೇವಾಲಾಲರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಐಕ್ಯರಾದ ಮಹಾರಾಷ್ಟ್ರದ ಪೌರಗಡದಲ್ಲಿ ಬೃಹತ್ ದೇವಾಲಯವನ್ನು ನಿರ್ಮಿಸಲಾಗಿದ್ದು, ಲಕ್ಷಾಂತರ ಭಕ್ತರು ಪ್ರತಿ ವರ್ಷ ಅಲ್ಲಿಗೆ ಭೇಟಿ ನೀಡುತ್ತಾರೆ‘ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ದಯಾನಂದ ಅಗಸರ, ’ಸಂತ ಸೇವಾಲಾಲರ ಆದರ್ಶಗಳನ್ನು ಪಾಲನೆ ಮಾಡಬೇಕು‘ ಎಂದು ಹೇಳಿದರು.

ಸಂತ್ ಸೇವಾಲಾಲ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ರಮೇಶ ರಾಥೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ವಿಭಾಗದ ಬಂಜಾರಾ ವಿದ್ಯಾರ್ಥಿನಿಯರು ತಮ್ಮ ಸಾಂಪ್ರದಾಯಕ ಉಡಿಗೆಯೊಂದಿಗೆ ಜ್ಯೋತಿ ರಾಠೋಡ ನೇತೃತ್ವದಲ್ಲಿ ಸೇವಾಲಾಲರ ಹಾಡಿನೊಂದಿಗೆ ನೃತ್ಯ ಪ್ರದರ್ಶನ ಮಾಡಿದರು.

ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ವಾಗಮಾರೆ ಶಿವಾಜಿ, ಕುಲಸಚಿವ ಶರಣಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಪ್ರೊ .ಸೋನಾರ ನಂದಪ್ಪ, ವಿತ್ತಾಧಿಕಾರಿ ಪ್ರೊ. ಬಿ. ವಿಜಯ ಇದ್ದರು.

ವಿಶ್ವವಿದ್ಯಾಲಯ ನೌಕರರ ಸಂಘದ ಕಾರ್ಯದರ್ಶಿ ಬಿ.ಎಂ. ರುದ್ರವಾಡಿ ಕಾರ್ಯಕ್ರಮ ನಿರೂಪಿಸಿದರು.

ಡೊಂಗರಗಾಂವ ಗ್ರಾ.ಪಂ: ಕಮಲಾ‍‍ಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೇವಾಲಾಲರ ಜಯಂತಿ ಆಚರಿಸಲಾಯಿತು. ಜಿ.ಪಂ. ಅಧ್ಯಕ್ಷೆ ಲಕ್ಷ್ಮಿಬಾಯಿ ಅನಿಲಕುಮಾರ್ ರಾಠೋಡ, ಉಪಾಧ್ಯಕ್ಷ ಸುರೇಶ್ ಭರಣಿ,ಸದಸ್ಯ ಆನಂದ ರಾಗಿ, ಅಶ್ವಿನಿ, ಶಿವಪುತ್ರಪ್ಪ ವಾಡಿ, ಶ್ರೀಕಾಂತ ಕಾಂಬಳೆ, ಶಿವಕುಮಾರ್ ಜನಕಟ್ಟಿ, ಪ್ರೇಮ ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT