ಸೋಮವಾರ, ನವೆಂಬರ್ 30, 2020
24 °C

ಕೊಟಗಾ: ಎಗ್ಗಿಲ್ಲದೆ ಸಾಗಿದ ಮರಳು ಅಕ್ರಮ ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಕೊಟಗಾ ಗ್ರಾಮದಲ್ಲಿ ಹಾಡು ಹಗಲೇ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೊಟಗಾ ಗ್ರಾಮಕ್ಕೆ ಹೊಂದಿಕೊಂಡಂತೆಯೇ ಮುಲ್ಲಾಮಾರಿ ನದಿ ಹರಿಯುತ್ತದೆ ಇಲ್ಲಿಯೇ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಲಾಗಿದೆ. ಬಾಂದಾರಿನಲ್ಲಿ ಸಂಗ್ರಹವಾದ ಅಪಾರ ಪ್ರಮಾಣದ ಮರಳಿನ ಲೂಟಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ನದಿಗೊಂಟ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಡುಹಗಲೇ ಮರಳು ನದಿಯಿಂದ ತಂದು ದಂಡೆ ಮೇಲೆ ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಸಂಜೆಗೆ ಟ್ರ್ಯಾಕ್ಟರ್‌ ಮೂಲಕ ಇದನ್ನು ಸಾಗಿಸುತ್ತಾರೆ. ಗ್ರಾಮಸ್ಥರು ಟ್ರ್ಯಾಕ್ಟರ್‌ ಮಾಲೀಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ.

ಮರಳು ಮಾಫಿಯಾ ತಮ್ಮ ಪ್ರಭಾವ ಬಳಸಿಕೊಂಡು ಜನರ ಎಚ್ಚರಿಕೆ ಕಡೆಗಣಿಸಿ ವರ್ಷ ಪೂರ್ತಿ ಮರಳು ಲೂಟಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಗೆ ಗ್ರಾಮದ ಮುಖಂಡರಾದ ಗೌಡಪ್ಪ ಪೊಲೀಸ್ ಪಾಟೀಲ, ನಾಗರಾಜ ಶೇರಿಕಾರ, ಸಿದ್ರಾಮ ಉಚ್ಚೇದ್, ಭೀಮರಾವ ಶೇರಿಕಾರ, ಮಲ್ಲಿನಾಥ ಕಿಣಗಿ, ಶಿವಯ್ಯ ಸ್ಥಾವರ, ಸಿದ್ರಾಮ ಇಟಗಿ, ಸಿದ್ರಾಮ ಜಿ. ಶೇರಿಕಾರ, ನಾಗರಾಜ ಉಚ್ಚೇದ್, ವಿಶ್ವನಾಥ ಉಚ್ಛೇದ್ ಮತ್ತು ಸಂಗಮೇಶ ಶೇರಿಕಾರ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು