ಕಲಬುರಗಿ: ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೊರಟಿರುವ ಪ್ರೇಮವಾಹಿನಿ ರಥವು ಇದೇ 14ರಂದು ಕಲಬುರಗಿ ಜಿಲ್ಲೆಯ ಜೇವರ್ಗಿಗೆ ಆಗಮಿಸಲಿದೆ ಎಂದು ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷ ಶಿವಾನಂದ ಬಿರಾದಾರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೇವರ್ಗಿಯಿಂದ ಬರುವ ರಥವನ್ನು ಬೈಕ್ ರ್ಯಾಲಿಯ ಮೂಲಕ ಮೆರವಣಿಗೆ ಮಾಡಲಾಗುವುದು. ನಂತರ ಶಹಾಬಾದ್ ರಸ್ತೆಯಲ್ಲಿರುವ ಶೆಟ್ಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಆವರಣದಲ್ಲಿ ರಾತ್ರಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಏ. 15ರಂದು ಬೆಳಿಗ್ಗೆ ರಥವು ಯಾದಗಿರಿಗೆ ತೆರಳಲಿದ್ದು, ಅಲ್ಲಿಂದ ನಾಲವಾರ, ವಾಡಿ, ಚಿತ್ತಾಪುರ, ಟೆಂಗಳಿ ಕ್ರಾಸ್ ಮೂಲಕ ಕಾಳಗಿಗೆ ತೆರಳಲಿದೆ. ಅಲ್ಲಿನ ಸತ್ಯ ಸಾಯಿ ಸೇವಾ ಮಂದಿರದಲ್ಲಿ ಮಹಾನಾರಾಯಣ ಸೇವೆ ನಡೆಯಲಿದೆ. 16ರಂದು ಬೆಳಿಗ್ಗೆ 8ಕ್ಕೆ ಸತ್ಯ ಸಾಯಿ ಸೇವಾ ಮಂದಿರದಿಂದ ಹೊರಟು ಸಂಜೆ 5ಕ್ಕೆ ಕಲಬುರಗಿಗೆ ಬರಲಿದೆ. ನಗರೇಶ್ವರ ಶಾಲೆಯ ಮುಂಭಾಗದಿಂದ ವಿದ್ಯಾನಗರದ ಸತ್ಯ ಸೇವಾ ಸಾಯಿ ಸಮಿತಿಯವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ಶಹಾಬಜಾರ್ ಲಾಲ್ ಹನುಮಾನ್ ಗುಡಿಯ ಮೂಲಕ ಗಂಧಿ ಗುಡಿ ಕಲ್ಯಾಣ ಮಂಟಪ ತಲುಪಲಿದೆ. 17ರಂದು ಬೆಳಿಗ್ಗೆ 8ಕ್ಕೆ ಶೇಖ ರೋಜಾದಿಂದ ಆಳಂದ ಚೆಕ್ ಪೋಸ್ಟ್ ರಿಂಗ್ ರೋಡ್ ಮಾರ್ಗವಾಗಿ ಬೀದರ್ ಜಿಲ್ಲೆಗೆ ತೆರಳಲಿದೆ ಎಂದರು.

ವಿ.ಕೆ. ಚೌಡೇಕರ್, ಸೋನಾಬಾಯಿ ಕೋಣಿನ, ವಿಮಲಾ ಶೆಟ್ಟಿ, ರಾಜಶೇಖರ ಸಾಲಿ, ನಾಗೇಶ, ಬಸವರಾಜ ಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-1166268023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.