ಸತ್ಯಾತ್ಮತೀರ್ಥರ ಚಾತುರ್ಮಾಸ್ಯ 5ರಿಂದ

7

ಸತ್ಯಾತ್ಮತೀರ್ಥರ ಚಾತುರ್ಮಾಸ್ಯ 5ರಿಂದ

Published:
Updated:
Deccan Herald

ಕಲಬುರ್ಗಿ: ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 23ನೇ ಚಾತುರ್ಮಾಸ್ಯ ಮಹೋತ್ಸವ ಆಗಸ್ಟ್‌ 5ರಿಂದ 25ರ ವರೆಗೆ ಇಲ್ಲಿಯ ಬ್ರಹ್ಮಪುರ ಉತ್ತರಾದಿಮಠದ ರುಕ್ಮಿಣಿ–ವಿಠಲ ಮಂದಿರದಲ್ಲಿ ಜರುಗಲಿದೆ.

ಆ.5ರಂದು ಸಂಜೆ 5ಕ್ಕೆ ಶ್ರೀಗಳ ಶೋಭಾಯಾತ್ರೆ ಜರುಗಲಿದೆ. 6ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮೂಲರಾಮದೇವರ ಪೂಜೆ ಚಾತುರ್ಮಾಸ್ಯ ವ್ರತ ಸಂಕಲ್ಪ ಜರುಗಲಿದೆ.

ಚಾತುರ್ಮಾಸ್ಯದಲ್ಲಿ ಶ್ರೀಗಳು ನಿತ್ಯ ಬೆಳಿಗ್ಗೆ 7ರ ವರೆಗೆ ಶ್ರೀಮಠದ ವಿದ್ಯಾರ್ಥಿಗಳಿಗೆ ಶ್ರೀಮನ್ನ್ಯಾಯಸುಧಾ ಪಾಠ ಹಾಗೂ 7ರಿಂದ 8 ಗಂಟೆಯವರೆಗೆ ಭಕ್ತರಿಗೆ ಶ್ರೀಕೃಷ್ಣಾಮೃತ ಮಹಾರ್ಣವ ಪಾಠ ಮಾಡುವರು.

ಬೆಳಿಗ್ಗೆ 8ರಿಂದ 9.30 ಗಂಟೆಯ ವರೆಗೆ ಪಾದಪೂಜೆ, ಮುದ್ರಾಧಾರಣೆ, 10ಕ್ಕೆ ಮೂಲರಾಮದೇವರ ಪೂಜೆ. ಮಧ್ಯಾಹ್ನ 12.30ಕ್ಕೆ ತೀರ್ಥಪ್ರಸಾದ ಜರುಗಲಿವೆ.

ಸಂಜೆ 5ರಿಂದ 6.45ರ ವರೆಗೆ ಇಲ್ಲಿಯ ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾಂಸರ ಪ್ರವಚನ. ಸಂಜೆ 7ರಿಂದ ಶ್ರೀಗಳು ಸಂದೇಶ ನೀಡುವರು.

ಮಾಹಿತಿಗೆ ಚಾತುರ್ಮಾಸ್ಯ ಸೇವಾ ಸಮಿತಿಯವರನ್ನು ಮೊ.94484 41740, 96865 28491, 94481 81288 ಸಂಪರ್ಕಿಸಲು ಕೋರಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !