ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ

7

ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ

Published:
Updated:
Prajavani

ಕಲಬುರ್ಗಿ: ‘ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರ ಬಹುದಿನಗಳ ಕನಸಾದ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯ ಕಾರ್ಯ ಪ್ರಗತಿಯಲ್ಲಿದೆ’ ಎಂದು ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ ಪ್ರಧಾನ ಸಂಪಾದಕ ಡಾ.ಎಂ.ಎಸ್. ಪಾಟೀಲ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯ ಮತ್ತು ಮಠ ಮಾನ್ಯಗಳು ಮಾಡದ ಈ ಕೆಲಸವನ್ನು ಡಾ. ಶರಣಬಸವಪ್ಪ ಅಪ್ಪ ಅವರು ಮಾಡಲು ಮುಂದಾಗಿದ್ದಾರೆ. ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಗಾಗಿ ತಮ್ಮ ವಿದ್ಯಾಸಂಸ್ಥೆಯ ಎಲ್ಲ ಅಧ್ಯಾಪಕರಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಗೊಂಡಿದೆ’ ಎಂದರು.

ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳ ಅಧ್ಯಾಪಕರು, ಶರಣಬಸವ ವಿಶ್ವವಿದ್ಯಾಲಯದ ಅಧ್ಯಾಪಕರು ಹಾಗೂ ಆಸಕ್ತ ಪ್ರಾಧ್ಯಾಪಕರು ಸೇರಿದಂತೆ ಸುಮಾರು 50 ಜನ ತೊಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಅಧ್ಯಾಪಕರು ಪದಕೋಶ ರಚನೆಯಲ್ಲಿ ಎದುರಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆದುಕೊಂಡರು. ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯು ಸಾಕಷ್ಟು ಶ್ರಮ ಬಯಸುವುದರಿಂದ ತಾಳ್ಮೆಯಿಂದ ಈ ಕೆಲಸ ಪೂರೈಸಬೇಕು ಎಂಬ ಸಲಹೆ ನೀಡಲಾಯಿತು.

ಡಾ.ಎಸ್.ಜಿ. ಡೊಳ್ಳೆಗೌಡರ್, ಡಾ.ಡಿ.ಟಿ. ಅಂಗಡಿ, ಡಾ.ಎನ್.ಎಸ್.ಪಾಟೀಲ, ಡಾ.ನೀಲಾಂಬಿಕಾ ಶೇರಿಕಾರ, ಡಾ.ಶಿವರಾಜಶಾಸ್ತ್ರಿ ಹೇರೂರ, ಡಾ.ಸುರೇಶ ನಂದಗಾಂವ, ಡಾ. ಸಾರಿಕಾದೇವಿ ಕಾಳಗಿ, ಡಾ. ಸುಮಂಗಲಾ ರೆಡ್ಡಿ, ಡಾ. ಪ್ರಭಾವತಿ ಚಿತಕೋಟಿ, ನಾನಾಸಾಹೇಬ್ ಹಚ್ಚಡದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !