ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಬಸವ ವಿಶ್ವವಿದ್ಯಾಲಯ: ನೂತನ ಸರ್ಟಿಫಿಕೆಟ್ ಕೋರ್ಸ್ ಆರಂಭ

Last Updated 26 ಸೆಪ್ಟೆಂಬರ್ 2021, 3:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನಲ್ಲಿರುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಮುಂದಿನ ಶೈಕ್ಷಣಿಕ ವರ್ಷ (2021–22) ದಿಂದ ನೂತನ ಸರ್ಟಿಫಿಕೆಟ್ ಕೋರ್ಸ್‌ ಪರಿಚಯಿಸಲು ನಿರ್ಧರಿಸಲಾಗಿದೆ’ ಎಂದು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಡಾ.ಶರಣಬಸವಪ್ಪ ಅಪ್ಪ ಅವರು ತಿಳಿಸಿದ್ದಾರೆ.

ಉದ್ದೇಶಿತ ಕೋರ್ಸ್‌ನ ಅವಧಿಯು ಒಂದು ವರ್ಷದ್ದಾಗಿರುತ್ತದೆ ಮತ್ತು ಈ ಕೋರ್ಸ್ ನಿರ್ದಿಷ್ಟವಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಸರಿಯಾದ ಅರ್ಹತೆ ಇಲ್ಲದೆ ಕೆಲಸ ಮಾಡುವ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ವಕೀಲ ವೃತ್ತಿ, ಶಿಕ್ಷಕರು ಮತ್ತು ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು, ಸ್ವತಂತ್ರ ಪತ್ರಕರ್ತರಾಗಲು ಬಯಸುವವರು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.‌

ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್‌ ವಿ. ನಿಷ್ಠಿ ಮತ್ತು ಕುಲಸಚಿವ ಡಾ.ಅನೀಲಕುಮಾರ ಬಿಡವೆ ಅವರು, ಪ್ರಸ್ತಾವಿತ ಸರ್ಟಿಫಿಕೆಟ್ ಕೋರ್ಸ್ ಅರೆಕಾಲಿಕ ಕೋರ್ಸ್ ಆಗಿರುತ್ತದೆ. ಮಧ್ಯಾಹ್ನ, ಸಂಜೆ ಅಥವಾ ವಾರಾಂತ್ಯದಲ್ಲಿ ಈ ಕೋರ್ಸ್‌ಗೆ ಪ್ರವೇಶ ಪಡೆದವರಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಇದನ್ನು ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಎರಡಕ್ಕೂ ಸಂಯೋಜಿತ ಕೋರ್ಸ್‌ ಆಗಿ ವಿನ್ಯಾಸಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಪಠ್ಯವು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ, ಬರವಣಿಗೆ ಕೌಶಲ, ವ್ಯಾಕರಣವನ್ನು ಸುಧಾರಿಸುವುದು, ಸರಿಯಾದ ಅರ್ಥದಲ್ಲಿ ಸುದ್ದಿಗಳ ಪ್ರಸ್ತುತಿಯನ್ನು ಕಲಿಯುವ ಅವಕಾಶವನ್ನು ಒದಗಿಸುತ್ತದೆ ಮತ್ತು ಅವರು ಇತ್ತೀಚಿನ ತಂತ್ರಜ್ಞಾನಕ್ಕೆ ಅಳವಡಿಸಿಕೊಂಡು ವಿಡಿಯೊ ಕ್ಯಾಮೆರಾಗಳು ಮತ್ತು ಸ್ಟಿಲ್ ಕ್ಯಾಮೆರಾಗಳ ತರಬೇತಿಯನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಈ ಕೋರ್ಸ್‌ಗೆ ಪ್ರವೇಶ ಪಡೆಯಲು, ಕೋರ್ಸ್ ಮತ್ತು ಶುಲ್ಕಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ. ಸಿವಾನಂದನ್‌ (9448040792)ಅವರನ್ನು ಸಂಪರ್ಕಿಸಬಹುದು. ಪ್ರವೇಶ ಪಡೆಯಲು ಡಾ.ಸುನೀತಾ ಪಾಟೀಲ (9632802927)ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT