ಶಾಲೆಯ ಏಳು ಕೊಠಡಿಗಳಲ್ಲಿ 1ರಿಂದ 8ರವರೆಗೆ ತರಗತಿಗಳು ನಡೆಯು ತ್ತಿದ್ದು, 280ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ಧಾರೆ. ಆದರೆ ಶಾಲಾ ಕೋಣೆಗಳು ಸುಸ್ಥಿತಿಯಲ್ಲಿ ಇರದ ಕಾರಣ ಮಕ್ಕಳ ಕಲಿಕಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗಿದೆ. ಏಳು ಕೋಣೆಗಳ ಪೈಕಿ ನಾಲ್ಕು ಕೋಣೆಗಳು ಸಂಪೂರ್ಣ ಹಾಳಾಗಿದ್ದು, ಈ ಕೋಣೆಗಳಲ್ಲಿ ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ಉಳಿದ ಮೂರು ಕೋಣೆಗಳಲ್ಲಿ ಒಂದು ಬಿಸಿಯೂಟಕ್ಕೆ ಬಳಕೆಯಾದರೆ ಇನ್ನೊಂದು ಕಚೇರಿ ನಿರ್ವಹಣೆಗೆ ಬಳಕೆಯಾಗುತ್ತಿದೆ.