ಸೇಡಂ: ನಗರದ ವಕೀಲರ ಸಂಘದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾವತಿ ಮರೆಪ್ಪ ಸೇಡಂಕರ್ ಮತ್ತು ಮಹಾದೇವಿ ವೀರಣ್ಣ ನಾಮಪತ್ರ ಸಲ್ಲಿಸಿದ್ದರು.

ಹೇಮಾವತಿ ಮರೆಪ್ಪ ಸೇಡಂಕರ್ 71 ಮತ ಪಡೆದು ಗೆಲುವು ಸಾಧಿಸಿದರೆ, ಮಹಾದೇವಿ ವೀರಣ್ಣ 70 ಮತ ಪಡೆದು ಪರಾಭವಗೊಂಡರು. ಒಂದೇ ಮತದ ಅಂತರದಲ್ಲಿ ಹೇಮಾವತಿ ಸೇಡಂಕರ್ ಗೆಲುವು ಸಾಧಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭೀಮರಾಯ ದಂಡೋತಿ ಮತ್ತು ಶಾಂತಕುಮಾರ ಹಿರೇಮಠ ನಾಮಪತ್ರ ಸಲ್ಲಿಸಿದ್ದರು.

ಭೀಮರಾಯ ದಂಡೋತಿ 76 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕೋಶಾಧ್ಯಕ್ಷ ಸ್ಥಾನಕ್ಕೆ ಜಗದೇವಪ್ಪ ಭೀಮ್ನಳ್ಳಿ ಮತ್ತು ಚಾಂದಪಾಶಾ ಬುರಗಪಲ್ಲಿ ನಾಮಪತ್ರ ಸಲ್ಲಿಸಿದ್ದರು. ಜಗದೇವಪ್ಪ ಭೀಮ್ನಳ್ಳಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ವಿಜಯೋತ್ಸವ ಆಚರಿಸಲಾಯಿತು. ಪ್ರವೀಣ ಕುಲಕರ್ಣಿ ಚುನಾವಣಾಧಿಕಾರಿಯಾಗಿದ್ದರು. ಸದಾಶಿವ ಬಳಗಾರ, ಶ್ರೀಶೈಲ್ ಬಿರಾದಾರ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ವಕೀಲರಾದ ಅನಂತಯ್ಯ ಮುಸ್ತಾಜರ್, ರಾಜೇಂದ್ರ ಮುನ್ನೂರ, ಸತೀಶ ಪಾಟೀಲ ತರನಳ್ಳಿ, ವಿಜಯಕುಮಾರ ಮಿಸ್ಕಿನ್, ನಾರಾಯಣ ಯಾನಾಗುಂದಿ, ರಾಘವೇಂದ್ರ ಮುಸ್ತಾಜರ್, ಮೀನಾಕ್ಷಿ ಸ್ಥಾವರಮಠ, ಚಂದ್ರಕಲಾ ಇಂಜಳ್ಳಿಕರ್, ಅಂಕಿತಕುಮಾರ ಜೋಶಿ, ರಮೇಶ ಇಂಜಳ್ಳಿಕರ್, ಮಹೇಂದ್ರರೆಡ್ಡಿ, ನರೇಂದ್ರ ಇಲ್ಲಾಳ, ಸಾಯಿರೆಡ್ಡಿ ಹೂವಿನಭಾವಿ, ಜಗನ್ನಾಥ ತರನಳ್ಳಿ, ವಸಂತಕುಮಾರ ಪೂಜಾರಿ, ಶಂಕರ ರಮಾನಂದ ಅವಂಟಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-31-609746261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.