ಸೇಡಂ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಪ್ರತಿಫಲದಿಂದ ದೇಶದಲ್ಲಿ ಸಮಾನತೆ, ಸಮೃದ್ಧಿಯ ಬದುಕು ನಡೆಸಲು ಸಾದ್ಯವಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಅಂಬೇಡ್ಕರ್ ಮೂರ್ತಿ ಎದುರು ಛಲವಾದಿ ಸಮಾಜ ಹಾಗೂ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಈಚೆಗೆ ಆಯೋಜಿಸಿದ್ದ ‘ಅಂಬೇಡ್ಕರ್ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ದಲಿತರ ಸಮುದಾಯದವರು ಶಿಕ್ಷಣ ಮತ್ತು ಸಂಘಟನೆಯ ಮೂಲಕ ಮುಂದೆ ಬರಬೇಕಾದ ಅವಶ್ಯಕತೆ ಇದೆ. ಯಾವುದೇ ರಾಜಕಾರಣಕ್ಕೂ ಬಗ್ಗದೆ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು’ ಎಂದರು.

ಪೌರಾಯುಕ್ತ ಶರಣಯ್ಯಸ್ವಾಮಿ, ಸಿಪಿಐ ಮಹಾದೇವ ದಿಡ್ಡಿಮನಿ, ಮಲ್ಲಿಕಾರ್ಜುನ ಗಿರಿ, ಗುರುರಾಜ್ ಕುಲಕರ್ಣಿ, ಶರಣು ಮಹಾಗಾಂವ ಅವರನ್ನು ಸನ್ಮಾನಿಸಲಾಯಿತು.

ಬೀದರ್ನ ಭಂತೆ ವರಜ್ಯೋತಿ, ಕೋಡ್ಲಾ ಉರಿಲಿಂಗ ಪೆದ್ದೀಶ್ವರ ಮಠ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಬಸವನಾಗೀದೇವ ಸ್ವಾಮೀಜಿ, ಮಾತನಾಡಿದರು. ಬಸವರಾಜ ಪಾಟೀಲ ಊಡಗಿ, ಶಿವಕುಮಾರ ಪಾಟೀಲ ತೆಲ್ಕೂರ, ಶಿವಕುಮಾರ ತೊಟ್ನಳ್ಳಿ, ಮಹಾಂತಪ್ಪ ಸಂಗಾವಿ, ಜೈಭೀಮ ಊಡಗಿ, ಸುಭಾಷ ಹಣಮನಳ್ಳಿ, ಸುನೀಲ್ ಹಳ್ಳಿ, ಗೌತಮ ಹಳ್ಳಿ, ಪ್ರಶಾಂತ ಸೇಡಂಕರ್, ವಿಲಾಸಗೌತಮಂ, ಅಬ್ದುಲ್ ರಷೀದ್, ಓಂಪ್ರಕಾಶ ಪಾಟೀಲ, ಹಾಜಿ ನಾಡೆಪಲ್ಲಿ, ಲಕ್ಷ್ಮಣ ರಂಜೋಳ್ಕರ್, ಸಾಗರ ಕಲಕರಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-31-129375586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.