ಸೇಡಂ: ‘ಬಂಜಾರ ಸಮಾಜದವರು ಕಾಯಕನಿಷ್ಠೆ ಯುಳ್ಳವರಾಗಿದ್ದು, ಅವರು ಮಾಡುವ ಧರ್ಮದ ಕಾರ್ಯಗಳು ಅತ್ಯಂತ ಪವಿತ್ರ ಮತ್ತು ಮಹತ್ವದ್ದಾಗಿರುತ್ತವೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಚೋಟಿಗಿರಣಿ ಬಡಾವಣೆಯಲ್ಲಿ ಶನಿವಾರ ನಡೆದ ನೂತನ ಜಗದಂಬಾದೇವಿ ಮತ್ತು ಸಂತ ಸೇವಾಲಾಲ್ ಮಹಾರಾಜರ ದೇವಾಲಯಯದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಸುಮಾರು 54 ತಾಂಡಾಗಳಿದ್ದು, 40ಕ್ಕೂ ಅಧಿಕ ತಾಂಡಾಗಳಲ್ಲಿ ಸಂತ ಸೇವಾಲಾಲ್ ಮತ್ತು ಜಗದಂಬಾದೇವಿ ಮಂದಿರವನ್ನು ನಿರ್ಮಿಸಿದ್ದಾರೆ. ಬಂಜಾರ ಸಮಾಜದವರು ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯತ್ತ ಹೆಜ್ಜೆ ಇಡುತ್ತಿದ್ದಾರೆ’ ಎಂದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಕಾಡಿನಲ್ಲಿರುವ ಬಂಜಾರ ಜನರು ಗೋ ಪ್ರೇಮಿಗಳು’ ಎಂದರು.

ಗೊಬ್ಬುರವಾಡಿಯ ಬಳಿರಾಮ ಮಹಾರಾಜ್ ಮಾತನಾಡಿ, ‘ಸೇಡಂ ನಗರದಲ್ಲಿ ಐತಿಹಾಸಿಕ ದೇವಾಲಯವನ್ನು ಬಂಜಾರ ಸಮಾಜದವರು ನಿರ್ಮಾಣ ಮಾಡಿರುವುದು ಶ್ಲಾಘನೀಯ’ ಎಂದರು.

ಹಾಲಪ್ಪಯ್ಯ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ, ಮುಖಂಡರಾದ ಶಿವಕುಮಾರ ಬೋಳಶೆಟ್ಟಿ, ವೀರೇಶ ಹೂಗಾರ, ಗೋಪಾಲಸೇಠ ಬಲ್ದಾವ ಮಾತನಾಡಿದರು.

ಜಗದಂಬಾ ಸೇವಾಲಾಲ್ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಶೋಕ ಪವಾರ, ಗೋವಿಂದ ರಾಠೋಡ, ಗೋಪಾಲ ರಾಠೋಡ, ಮನೋಜ್ ರಾಠೋಡ, ರಾಜು ನಾಯಕ, ರಾಜು ಚವಾಣ್, ನಾಮದೇವ ರಾಠೋಡ, ಗೋಪಾಲ ರಾಠೋಡ, ರವಿ ಜಾಧವ, ಕಿಶನ್ ರಾಠೋಡ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಮಹಾಂತಪ್ಪ ಸಂಗಾವಿ, ಶಿವಾನಂದ ಸ್ವಾಮಿ, ಸಂತೋಷ ಕುಲಕರ್ಣಿ, ಸಂತೋಷ ಭೀಮ್ನಳ್ಳಿ, ಕಿಶೋರ ಸೇಠ, ರಾಜಕುಮಾರ ಬಿರಾದಾರ, ಸಿದ್ದಣ್ಣ ಶೆಟ್ಟಿ, ಬಸವರಾಜ ಕೋಸಗಿ, ಚಂದ್ರಶೇಖರ ಬಿಬ್ಬಳ್ಳಿ, ಹಣಮಂತರಾವ ಪಾಟೀಲ, ನಂದು ರಾಠೋಡ, ಸಿದ್ದು ನಾಲವಾರ, ವೀರೇಂದ್ರ ರೆಮ್ಮಣ್ಣಿ, ಮಹಾದೇವ ದಿಡ್ಡಿಮನಿ, ರಾಜಶೇಖರ ಅವಂಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-31-1151591368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.