ಸೇಡಂ: ನಗರದ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಬಸವ ಜಯಂತಿ ನಿಮಿತ್ತ ನಡೆದ ರಾಸುಗಳ ಪ್ರದರ್ಶನ ಗಮನ ಸೆಳೆಯಿತು.

ಪ್ರತಿ ವರ್ಷವೂ ಬಸವ ಜಯಂತಿ ನಿಮಿತ್ತವಾಗಿ ನಡೆಯುವ ರಾಸುಗಳ ಪ್ರದರ್ಶನಕ್ಕೆ ರೈತರು ಎತ್ತು, ಆಕಳು, ಹೋರಿಗಳನ್ನು ಬಗೆ ಬಗೆಯ ಅಲಂಕಾರದ ವಸ್ತುಗಳಿಂದ ಆಕರ್ಷಕವಾಗಿ ಸಿಂಗರಿಸಿಕೊಂಡು ಬಂದಿದ್ದರು.

ರೈತರು ತಮ್ಮ ಎತ್ತುಗಳಿಗೆ ಮೊಗಡು, ಮೂಗರಾಣಿ, ಟೊಂಕದ ಪಟ್ಟಿ, ಕೊಂಬುಗಳಿಗೆ ವಿಶೇಷ ಅಲಂಕಾರಿಕ ವಸ್ತುಗಳನ್ನು ಹಾಕಿ ಸಿಂಗರಿಸಿದ್ದರು.

ರಾಸುಗಳ ಪ್ರದರ್ಶನದಲ್ಲಿ ಪಾಲ್ಗೊಂಡ ಎತ್ತು, ಆಕಳು, ಹೋರಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು.

ಖಿಲಾರಿ, ದೇವಣಿ ಮತ್ತು ಜವಾರಿ ಎತ್ತು, ದೇವಣಿ, ಗೀರ್, ಜವಾರಿ ಆಕಳುಗಳು ಮತ್ತು ಒಂಟೆತ್ತಿನ ಹೋರಿಗಳು ಆಗಮಿಸಿದ್ದವು. 44 ಜೋಡಿ ಎತ್ತು, 88 ಒಂಟೆತ್ತು, 25 ಆಕಳು ಸೇರಿದಂತೆ ಒಟ್ಟು 180ಕ್ಕೂ ಅಧಿಕ ರಾಸುಗಳು ಬಸವ ಜಯಂತಿ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಉತ್ತಮ ಮತ್ತು ಆಕರ್ಷವಾಗಿ ಕಂಡ ರಾಸುಗಳಿಗೆ ತಾಡಪತ್ರಿ, ಬಕೆಟ್, ಔಷಧ ಸಿಂಪಡಣೆ ಯಂತ್ರ ಸೇರಿದಂತೆ ವಿವಿಧ ಬಹುಮಾನಗಳನ್ನು ವಿತರಿಸಲಾಯಿತಿ.

ಈ ರಾಸುಗಳ ಪ್ರದರ್ಶನದ ಸಂದರ್ಭದಲ್ಲಿ ಕೃಷಿ ಅಧಿಕಾರಿ ಬಸವರಾಜ ಕೋಡ್ಸಾ, ಪಶು ಇಲಾಖೆಯ ವೈದ್ಯರಾದ ಆಶೀಶ್ ಮಹಾಜನ್, ರೋಹಿತ, ಕೊತ್ತಲ ಬಸವೇಶ್ವರ ದೇವಾಲಯದ ಪಂಚಮಂಡಳಿ ಕೋಶಾಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ರೈತ ಮುಖಂಡ ಶರಣಪ್ಪ ರುದ್ನೂರ, ನಾಗಿಂದ್ರಪ್ಪ ಡೊಳ್ಳಾ, ಬಸವರಾಜ ತಡಕಲ್, ಶರಣು ಕಿರಣಗಿ, ಸಂಗಮೇಶ ಇಂಜಳ್ಳಿ, ಅನಂತರೆಡ್ಡಿ ಪಾಟೀಲ, ವಿಭಾಕರ ಪಾಟೀಲ, ವೀರಣ್ಣ ಮಾದೆನೋರ್, ಶರಣಗೌಡ ರುದ್ನೂರ, ಜನಾರ್ಧನರೆಡ್ಡಿ ತುಳೇರ, ಬಸವರಾಜ ಹಲಚೇರಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-31-1579442473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.