ಸೇಡಂ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ ಬುದ್ಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬುದ್ಧ ಪೂರ್ಣಿಮೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಛಲವಾದಿ ಸಮಾಜದ ಪದಾಧಿಕಾರಿಗಳು ಭಾವಚಿತ್ರದ ಮೆರವಣಿಗೆ ಮಾಡಬೇಕಿತ್ತು. ಇದೊಂದು ಕಾಟಾಚಾರದ ಜಯಂತಿ ಮಾಡಲಾಗುತ್ತಿದೆ ಎಂದು ಜಯಂತಿಯಿಂದ ಹೊರಬಂದು ಪ್ರಜಾಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಆಕ್ರೋಶ ಹೊರಹಾಕಿದರು.

ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ, ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಮನವೋಲಿಸಲು ಪ್ರಯತ್ನಿಸಿದರು.

ಮುಖಂಡ ಈಶ್ವರಾಜ್ ಮಾದವಾರ ಮಾತನಾಡಿ, ಜಯಂತಿ ಮತ್ತೊಂದು ದಿನ ನಿಗದಿಪಡಿಸಿ ಬುದ್ಧನ ಪುತ್ಥಳಿಯ ಅದ್ದೂರಿ ಮೆರವಣಿಗೆ, ಸಾರ್ವಜನಿಕ ಕಾರ್ಯಕ್ರಮ ಮಾಡುವುದಾದರೆ ನಾವು ಒಪ್ಪುತ್ತೇವೆ ಎಂದರು. ಇದಕ್ಕೊಪ್ಪಿದ ತಾಲ್ಲೂಕು ಆಡಳಿತ ಸಮಾಜದ ಪ್ರತಿನಿಧಿಗಳ ಒಪ್ಪಿಗೆಯಂತೆ ಮೇ 7ರಂದು ಸರ್ಕಾರಿ ನೌಕರರ ಭವನದಲ್ಲಿ ಮತ್ತೊಮ್ಮೆ ಅದ್ದೂರಿ ಬುದ್ಧ ಜಯಂತಿ ಆಚರಣೆ, ಮೆರವಣಿಗೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಪೌರಾಯುಕ್ತ ಶರಣಯ್ಯಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧಾ ಪಾಟೀಲ, ಆರೋಗ್ಯ ಅಧಿಕಾರಿ ಡಾ.ಸಂಜುಕುಮಾರ ಪಾಟೀಲ, ಶಿರಸ್ತೆದಾರ ರಾಜಕುಮಾರ ಶೆಟ್ಟಿ, ಛಲವಾದಿ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಮಹಾಬೋಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುನೀಲಕುಮಾರ ಕೊಳ್ಳಿ, ಉಪಾಧ್ಯಕ್ಷ ಹಣಮಂತ ಸಾಗರ, ಕಾರ್ಯದರ್ಶಿ ಮಾರುತಿ ಹುಳಗೋಳಕರ್, ಗೌತಂ ಹಳ್ಳಿ, ವಿಠ್ಠಲ್ ಭರಮಕರ್ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-31-818274950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.