ಸೇಡಂ: ನಗರದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಸಚಿವ ಡಾ.ಶರಣಪ್ರಕಾಶ ಪಾಟೀಲ ಊಡಗಿ ಅವರ 59ನೇ ಜನ್ಮದಿನದ ನಿಮಿತ್ತ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದಿಂದ ಶ್ರವಣ ದೋಷದವರಿಗೆ ಉಚಿತ ಶ್ರವಣ ಸಾಧನಗಳನ್ನು ವಿತರಣಾ ಸಮಾರಂಭ ಜರುಗಿತು.

ಈ ಮೊದಲು ಶ್ರವಣ ದೋಷವಿರುವವರಿಗೆ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗಿತ್ತು. ಸೋಮವಾರ ಸಚಿವ ಡಾ.ಶರಣಪ್ರಕಾಶ ಪಾಟೀಲರ 59ನೇ ಜನ್ಮದಿನದ ನಿಮಿತ್ತ ಉಚಿತ ಶ್ರವಣ ಸಾಧನಗಳನ್ನು ವಿರಿಸಲಾಯಿತು. 31 ರಲ್ಲಿ 14 ವರ್ಷದೊಳಗಿನ 15ಕ್ಕೂ ಅಧಿಕ ಮಕ್ಕಳಿದ್ದರು. ಉಳಿದವರು 16ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೂ ಸಹ ಶ್ರವಣ ಸಾಧನ ವಿತರಿಸಲಾಯಿತು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದವರು ಈ ಹಿಂದೆ ಉಚಿತ ಹೃದಯ ತಪಾಸಣೆ ಶಿಬಿರ ಆಯೋಜಿಸಿ ಸುಮಾರು 600ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಶ್ರವಣ ದೋಷವಿರುವಂತಹವರಿಗೆ ಉಚಿತ ಶ್ರವಣ ಸಾಧನ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಜಿಮ್ಸ್ ಆಸ್ಪತ್ರೆಯ ವೈದ್ಯ ರಾವಾಲಿ ವಿ.ಪಾಟೀಲ, ಕಾಂಗ್ರೆಸ್ ಮುಖಂಡ ಮಹೇಶ ಪಾಟೀಲ ತರನಳ್ಳಿ, ಬಸವರಾಜ ರೇವಗೊಂಡ, ಜಿಂಜಾನಿ ಜಾಗಿರದಾರ, ಜಗದೇವಪ್ಪ ಕೊಂಕನಳ್ಳಿ, ನೀಲಕಂಠರಾವ ಪಾಟೀಲ, ಶಿವರುದ್ರಪ್ಪ ಕೊಳ್ಕುರ್, ಇತರರಿದ್ದರು. ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಸ್ವಾಗತಿಸಿದರು. ಪ್ರದೀಪ ಪಾಟೀಲ ಹೊಸಳ್ಳಿ ನಿರೂಪಿಸಿದರು. ಅನೀಲ ಸಜ್ಜನ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-31-94083401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.