ಸೇಡಂ: ಗ್ಯಾಸ್ ಸಿಲಿಂಡರ್ ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಒಂದು ತಿಂಗಳಿಂದ ಅಡುಗೆ ಅನಿಕ ಕೊರತೆಯಿಂದ ಜನ ನಿತ್ಯ ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಬುಕ್ ಮಾಡಿದರೂ ಸಿಗುತ್ತಿಲ್ಲ. ಏಜೆನ್ಸಿಯವರಿಗೆ ಕೇಳಿದರೇ ಬಂದಿಲ್ಲ ಎನ್ನುತ್ತಿದ್ದಾರೆ. ಸಿಲಿಂಡರ್ ಪಡೆಯಲು ಸರತಿಯಲ್ಲಿ ನಿಲ್ಲುವಂತಹ ದೃಶ್ಯಗಳು ಹರಿದಾಡುತ್ತಿದ್ದರೂ ಸರ್ಕಾರ ಇದರತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಜನರು ಸಿಲಿಂಡ್ ಪಡೆಯಲು ಹೆಚ್ಚು ಹಣ ಖರ್ಚು ಮಾಡುವಂತಹ ಪರಿಸ್ಥಿತಿ ಬಂದಿದೆ. ಒಂದು ಸಿಲಿಂಡರ್ ಪಡೆಯಲು ಹಳ್ಳಿಯಿಂದ ತಾಲ್ಲೂಕು ಕೇಂದ್ರಕ್ಕೆ ಬರಬೇಕು. ಸೇಡಂ ತಾಲ್ಲೂಕಿನ ಹಳ್ಳಿಗಳಿಗೆ ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಮಹೇಶ್ ಪಾಟೀಲ, ಚಂದ್ರಶೇಖರ ಪೂಜಾರಿ, ಶ್ರೀನಿವಾಸರೆಡ್ಡಿ ಮದನಾ, ದೇವು ಕುಮಾರ ನಾಟಿಕರ, ಭೀಮಯ್ಯ ಗುತ್ತೇದಾರ, ರಾಘವೇಂದ್ರ ಕಡಗಂಚಿ, ಕಿರಣಕುಮಾರ ಪಾಟೀಲ, ರಾಘವೇಂದ್ರ ಹೂಡಾ, ರವಿಸಿಂಗ, ಸುಭಾಷ ವಿಮಡಾಪುರ, ಚಂದ್ರಶೇಖರ ಮಡಿವಾಳ, ಅನಿಲ ನೀಲಿ, ಸುಭಾಸ ನಾಟೇಕಾರ, ಬಸವರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-31-146900767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.