ಸೇಡಂ: ಗಲ್ಫ್ ಯುದ್ಧ ಪರಿಣಾಮ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲವೆಂಬ ಆತಂಕದಲ್ಲಿ ಸಿಲಿಂಡರ್ ಏಜೆನ್ಸಿ ಅಂಗಡಿಗಳ ಮುಂದೆ ಸರತಿಗಟ್ಡಿ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

ಕಳೆದ 15-20 ದಿನಗಳಿಂದ ಜನರಲ್ಲಿ ಆತಂಕದ ಛಾಯೆ ಮೂಡಿದ್ದು, ಸಿಲಿಂಡರ್ ಪಡೆಯಲು ಗ್ಯಾಸ್ ಸಿಲಿಂಡರ್ ಸಮೇತ ಅಂಗಡಿಯತ್ತ ದೌಡಾಯಿಸುತ್ತಿದ್ದಾರೆ. ಬೆಳಿಗ್ಗೆ 6ರಿಂದಲೇ ಸರತಿ ಸಾಲಿನಲ್ಲಿ ಮಹಿಳೆಯರು, ಹಿರಿಯರು, ಮಕ್ಕಳು ಸಹ ನಿಲ್ಲುತ್ತಿದ್ದಾರೆ. ಬುಕ್ಕಿಂಗ್ ನಂಬರ್ಗೆ ಕರೆ ಮಾಡಿದರೂ ಬುಕ್ ಆಗುತ್ತಿಲ್ಲ ಎನ್ನುವುದೇ ಸಾಲುಗಟ್ಟಿ ನಿಲ್ಲಲು ಕಾರಣ.

‘ನಾನು ಸಿಲಿಂಡರ್ ಬುಕ್ ಮಾಡಿದ ಎರಡು ದಿನಗಳ ನಂತರ ಸರತಿಯಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆದಿದ್ದೇನೆ. ಈ ಮೊದಲು ಇಂದು ಬುಕ್ ಮಾಡಿದ್ರೆ ನಾಳೇನೆ ಸಿಗುತ್ತಿತ್ತು. ಒಂದಿನ ತಡವಾಗಿ ಸಿಕ್ಕಿದೆ. ಸಿಗುತ್ತಿಲ್ಲವೆಂಬ ಆತಂಕದಲ್ಲಿಯೇ ಬಂದಿದ್ದೆ. ಆದರೆ ಯಾವುದೇ ತೊಂದರೆಯಿಲ್ಲದೇ ಸಿಲಿಂಡರ್ ಸಿಕ್ಕಿದೆ. ಏಜೆನ್ಸಿಯವರು ಸರಿಯಾಗಿ ಗ್ಯಾಸ್ ಕೊಡುತ್ತಿದ್ದಾರೆ ಎನ್ನುತ್ತಾರೆ ಸೇಡಂ ನಿವಾಸಿ ಶರಣಪ್ಪ ತಳವಾರ ಸಮಾಧಾನ ಮಾತುಗಳನ್ನು ಆಡಿದರು.

‘ಪ್ರತಿ ದಿನ ನಮ್ಮಲ್ಲಿ 300 ಸಿಲಿಂಡರ್ ಮಾರಾಟ ಆಗುತ್ತಿದ್ದವು. ಈಗಲೂ ದಿನಕ್ಕೆ 260 ರಂತೆ ಗ್ರಾಹಕರಿಗೆ ನೀಡಲಾಗುತ್ತಿದೆ. ಆದರೆ ಗ್ಯಾಸ್ ಸಿಲಿಂಡರ್ ಲಾರಿ ಮೊದಲು ಪ್ರತಿದಿನ ಬರುತ್ತಿತ್ತು. ಈಗ ಒಂದು ದಿನ ಬಿಟ್ಟು ಬರುತ್ತಿದೆ. ಶಾಲೆಗಳಿಗೆ ಸಿಲಿಂಡರ್ ಕೊಡಲಾಗುತ್ತಿತ್ತು. ಈಗ ಶಾಲೆ ಮುಗಿದಿದ್ದು, ಗ್ಯಾಸ್ ಕಡಿಮೆ ಮಾರಾಟ ಆಗಬೇಕಿತ್ತು. ಆದರೆ ಈಗ ಗ್ಯಾಸ್ ಸಂಖ್ಯೆ ನಿತ್ಯ ಸರಾಸರಿ 300 ತರಿಸಿದರೂ ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ನಮ್ಮಲ್ಲಿ ಸಿಲಿಂಡರ್ ಸಮಸ್ಯೆಯೇ ಇಲ್ಲ. ಸಿಲಿಂಡರ್ ಬುಕ್ಕಿಂಗ್ ಲೇಟಾಗಿ ಬುಕ್ ಆಗುತ್ತಿದೆ. ಗ್ರಾಹಕರು ಆತಂಕ ಪಡಬಾರದು’ ಎನ್ನುತ್ತಾರೆ ಸವಿತಾ ಇಂಡೆನ್ ಗ್ಯಾಸ್ ಮಾಲೀಕ ಗೋವರ್ಧನ ಚವಾಣ್.

ಪ್ರತಿ ಲಾರಿಗೆ 350ಕ್ಕೂ ಅಧಿಕ ಸಿಲಿಂಡರಂತೆ ತಿಂಗಳಿಗೆ 10 ಲಾರಿಗಳೂ ಬರುತ್ತಿದ್ದವು. ಆದರೆ ಈ ತಿಂಗಳು ಎರಡು ಲಾರಿ ಮಾತ್ರ ಬಂದಿದ್ದರಿಂದ ಬುಕ್ ಮಾಡಿದ ದಿನಾಂಕ, ಓಟಿಪಿ ಆಧರಿಸಿ ಸಿಲಿಂಡರ್ ವಿತರಿಸಲಾಗುತ್ತಿದೆ ಎನ್ನುತ್ತಾರೆ ಕುರಕುಂಟಾ ಎಚ್.ಪಿ ಗ್ಯಾಸ್ ಸಿಲಿಂಡರ್ ಮಾಲೀಕ ವೆಂಕಟೇಶ ಪೂಜಾರಿ.

ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಮಾರಾಟ ಸ್ಥಗಿತ: ಕಳೆದ 20 ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸೇಡಂನಲ್ಲಿ ಸಿಗುತ್ತಿಲ್ಲ. ಹೀಗಾಗಿ ಹೋಟೆಲ್, ರೆಸ್ಟೋರೆಂಟ್, ಧಾಬಾ, ಟಿಫನ್ ಅಂಗಡಿಗಳ ವ್ಯಾಪಾರಸ್ಥರು ಗ್ಯಾಸ್ ಸಿಲಿಂಡರ್ ಇಲ್ಲದೇ ತೊಂದರೆ ಎದುರಿಸುವಂತಾಗಿದೆ. ಪರ್ಯಾಯವಾಗಿ ಕೆಲವರು ಮನೆಗೆ ಬಳಸುವ ಸಿಲಿಂಡರ್ಗಳನ್ನೇ ಹೋಟೆಲ್ಗಳಿಗೂ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಲವರು ಮನೆ ಬಳಕೆಯ ಸಿಲಿಂಡರ್ ಅನ್ನು ಹೋಟೆಲ್ ಅವರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಯುದ್ದದ ಛಾಯೇ ಸಿಲಿಂಡರ್ ಬಳಕೆ ಗ್ರಾಹಕರ ಹಾಗೂ ಹೋಟೆಲ್ ಉದ್ಯಮದವರಿಗೆ ಹೊಡೆತವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-34-2088416219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.