ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: 8 ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಬೆಂಬಲಿಗರು,ಕುಕ್ಕುಂದಾ ಗ್ರಾ.ಪಂ.ನಲ್ಲಿ ಅವಿರೋಧ ಆಯ್ಕೆ
Last Updated 5 ಫೆಬ್ರುವರಿ 2021, 5:46 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಪೈಕಿ ಗುರುವಾರ 8 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 1 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧ ಆಯ್ಕೆಯಾದರು.

ಮಳಖೇಡ: ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಳಖೇಡ ಗ್ರಾಮ ಪಂಚಾಯಿತಿಯೂ ಒಟ್ಟು 43 ಸದಸ್ಯ ಸ್ಥಾನವನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಶಾಂತಾಬಾಯಿ ಚೆನ್ನಬಸ್ಸಪ್ಪ ತಳಕಿನ್ ಮತ್ತು ನೂರಜಹಾನ್ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಜಾಧವ ಮತ್ತು ಅಂಬ್ರಿಷ್ ಗುಡಿ ನಾಮಪತ್ರ ಸಲ್ಲಿಸಿದ್ದರು. ನೂರಜಹಾನ್ 18 ಮತಗಳನ್ನು ಪಡೆದರೆ, ಶಾಂತಾಬಾಯಿ ಚನ್ನಬಸ್ಸಪ್ಪ ತಳಕಿನ್ 24 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. 1 ಮತ ತಿರಸ್ಕೃತವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಜಾಧವ 25 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಅಂಬ್ರಿಷ್ ಗುಡಿ 17 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದಲ್ಲಿಯೂ ಕೂಡ ಒಂದು ಮತ ತಿರಸ್ಕೃತವಾಯಿತು. ಗೆಲುವಿನ ನಗೆ ಬೀರುತ್ತಿದ್ದಂತೆಯೇ ಬಿಜೆಪಿ ಮುಖಂಡ ಅನೀಲಕುಮಾರ ಪಾಟೀಲ ತೆಲ್ಕೂರ, ಶರಣು ಆವಂಟಿ, ಕಲ್ಯಾಣಪ್ಪ ಪಾಟೀಲ, ಶ್ರೀನಾಥ ಪಿಲ್ಲಿ, ರವಿ ಮರಗೋಳ, ಗುರು ತಳಕಿನ್, ಬಿ.ಆರ್ ಪಾಟೀಲ ಸಂಗಾವಿ, ಫಯಾಜ್ ಇನಾಮದಾರ್, ಜಮೀಲ ಆಲಂಪೂರಿ, ಸಾಬಣ್ಣ ಸೊಲ್ಲಾಪೂರ, ಕಲ್ಯಾಣಿ ಮಂಗಾ, ಓಂಪ್ರಕಾಶ ಪಾಟೀಲ ಸಂಭ್ರಿಸಿದರು.

ಆಡಕಿ: 21 ಸದಸ್ಯ ಬಲದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ಸಾಯಿರೆಡ್ಡಿ ಮನ್ನೆ ಮತ್ತು ನಾಗರತ್ನ ಆಡಕಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಪಾಟೀಲ ಮತ್ತು ರಘುಪತರೆಡ್ಡಿ ಆಡಕಿ ನಾಮಪತ್ರ ಸಲ್ಲಿಸಿದರು. ಚಂದ್ರಕಲಾ ಸಾಯಿರೆಡ್ಡಿ ಮನ್ನೆ 11 ಮತಗಳನ್ನು ಪಡೆದು ವಿಜೇತರಾದರು. ವಿಜಯಕುಮಾರ ಪಾಟೀಲ 12 ಮತ ಪಡೆದು ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಸಿಂಧನಮಡು: 13 ಸದಸ್ಯ ಬಲದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಜೈಪಾಲರೆಡ್ಡಿ ಮಹಿಪಾಲರೆಡ್ಡಿ ಸಿಂಧನಮಡು ಮತ್ತು ಶರಣರೆಡ್ಡಿ ನಾರಾಯಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗಿರೆಮ್ಮ ಭಕ್ತಾನಂದ ಗುಂಡಳ್ಳಿ ಮತ್ತು ಶ್ರೀದೇವಿ ಶಿವರಾಯ ನಾಮಪತ್ರ ಸಲ್ಲಿಸಿದ್ದರು. 8 ಮತಗಳನ್ನು ಪಡೆದ ಜೈಪಾಲರೆಡ್ಡಿ ಸಿಂಧನಮಡು ಅಧ್ಯಕ್ಷರಾಗಿ ಆಯ್ಕೆಯಾದರೆ, 5 ಮತಗಳನ್ನು ಪಡೆದ ಶರಣರೆಡ್ಡಿ ನಾರಾಯಣರೆಡ್ಡಿ ಸೋಲನುಭವಿಸಿದರು. ಗಿರೆಮ್ಮ ಭಕ್ತಾನಂದ 8 ಮತ ಪಡೆದು ಉಪಾಧ್ಯಕ್ಷರಾದರೆ, ಶ್ರೀದೇವಿ ಶಿವರಾಯ 5 ಮತಗಳನ್ನು ಪಡೆದು ಪರಾಭವಗೊಂಡರು.

ಕುಕ್ಕುಂದಾ: ಒಟ್ಟು 12 ಸದಸ್ಯ ಬಲವನ್ನು ಹೊಂದಿರುವ ಕುಕ್ಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ ರೆಮಗೊಂಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಿ ಬರಮಕರ್ ಅವಿರೋಧವಾಗಿ ಆಯ್ಕೆಯಾದರು. ಪ್ರಮುಖರಾದ ಚನ್ನಬಸ್ಸಪ್ಪ ಹಾಗರಗಿ, ಧೂಳಪ್ಪ ದೊಡ್ಡಮನಿ, ವಿಶ್ವನಾಥ ಪಾಟೀಲ, ನಾಗರಾಜ ತೊಟ್ನಳ್ಳಿ, ರಾಮಶೆಟ್ಟಿ ಬೀರನಳ್ಳಿ ಇದ್ದರು.

ಮದನಾ: ಒಟ್ಟು 16 ಸದಸ್ಯ ಬಲವನ್ನು ಹೊಂದಿರುವ ಮದನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ಲಕ್ಷ್ಮಪ್ಪ ಮತ್ತು ಸುಜಾತಾ ಕಡಚರ್ಲಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಮ್ಮ ಖಂಡೆಭೋವಿ ಮತ್ತು ಚಂದ್ರಮ್ಮ ನಾಮಪತ್ರ ಸಲ್ಲಿಸಿದರು. 10 ಮತಗಳನ್ನು ಪಡೆಯುವ ಮೂಲಕ ಶ್ರೀದೇವಿ ಲಕ್ಷ್ಮಪ್ಪ ಅಧ್ಯಕ್ಷರಾಗಿ ಆಯ್ಕೆಯಾದರೆ, 6 ಮತಗಳನ್ನು ಪಡೆದು ಪರಾಭವಗೊಂಡರು. 9 ಮತಗಳನ್ನು ಪಡೆದು ವೆಂಕಟಮ್ಮ ಖಂಡೆಭೋವಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, 7 ಪರಾಭಗೊಂಡರು.

ಕುರಕುಂಟಾ: ಒಟ್ಟು 17 ಸದಸ್ಯ ಬಲವನ್ನು ಹೊಂದಿರುವ ಕುರಕುಂಟಾ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ತುಳಸಿರಾಮ್ ಪವಾರ ಮತ್ತು ಬಾಲರಾಜ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಕುಂಬಾರ ಮತ್ತು ಅಕ್ರಂಪಾಶಾ ನಾಮಪತ್ರ ಸಲ್ಲಿಸಿದ್ದರು. 10 ಮತ ಪಡೆದು ಲಲಿತಾ ತುಳಸಿರಾಮ್ ಪವಾರ ಅಧ್ಯಕ್ಷರಾಗಿ ಆಯ್ಕೆಯಾದರೆ, ಬಾಲರಾಜ್ ಸೋಲಂಡರು. ಉಪಾಧ್ಯಕ್ಷರಾಗಿ 10 ಮತ ಪಡೆದು ಸಂಗಪ್ಪ ಕುಂಬಾರ ಆಯ್ಕೆಯಾದರೆ, 6 ಮತ ಪಡೆದು ಅಕ್ರಂಪಾಶಾ ಸೋತರು.

ಮೋತಕಪಲ್ಲಿ: 19 ಸದಸ್ಯ ಬಲವನ್ನು ಹೊಂದಿರುವ ಮೋತಕಪಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಂದಿನಿ ಆವಂಟಿ ಮತ್ತು ಲಕ್ಷ್ಮಮಮ್ಮ ಗಾಡದಾನ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ತಿಪ್ಪಣ್ಣ ವೆಂಕಟಾಪುರ ಮತ್ತು ವೆಂಕ್ಯಾನಾಯಕ್ ನಾಮಪತ್ರ ಸಲ್ಲಿಸಿದ್ದರು. 9 ಮತ ಪಡೆದ ಲಕ್ಷ್ಮಮ್ಮ ಗಾಡದಾನ ಅಧ್ಯಕ್ಷರಾಗಿ ಆಯ್ಕೆಯಾದರೆ, 6 ಮತ ಪಡೆದ ನಂದಿನಿ ಆವಂಟಿ ಸೋಲನುಭವಿಸಿದರು. 10 ಮತ ಪಡೆದ ತಿಪ್ಪಣ್ಣ ವೆಂಕಟಾಪುರ ಉಪಾಧ್ಯಕ್ಷರಾದರೆ, 5 ಮತ ಪಡೆದ ವೆಂಕ್ಯಾನಾಯಕ ಪರಾಭವಗೊಂಡರು.

ಇಟಕಾಲ್: 19 ಸದಸ್ಯ ಬಲವನ್ನು ಹೊಂದಿರುವ ಇಟಕಾಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಭೀಮರೆಡ್ಡಿ ಗುಮಡಾಲ್ ಮತ್ತು ಫಂಡರಿ ಮುನೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನರ್ಮದಾ ಮುಧೋಳ ಮತ್ತು ಲಕ್ಷ್ಮಿ ವೆಂಕಟರಾಮುಲು ಬಡಿಗೇರ ನಾಮಪತ್ರ ಸಲ್ಲಿಸಿದ್ದರು. 10 ಮತಪಡೆದ ಫಂಡರಿ ಮುನೆ ಅಧ್ಯಕ್ಷರಾಗಿ ಆಯ್ಕೆಯಾದರೆ, 9 ಮತಗಳನ್ನು ಪಡೆದ ಭೀಮರೆಡ್ಡಿ ಗುಮಡಾಲ್ ಸೋಲನುಭವಿಸಿದರು. 11 ಮತಗಳನ್ನು ಪಡೆದ ನರ್ಮದಾ ಉಪಾಧ್ಯಕ್ಷರಾದರೆ, 8 ಮತ ಪಡೆದ ಲಕ್ಷ್ಮಿ ಬಡಿಗೇರ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT