ಸೇಡಂ (ಕಲಬುರಗಿ ಜಿಲ್ಲೆ): ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ.

ಬುಧವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭಗೊಂಡ ಮಳೆಯೂ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದೆ. ನಿರಂತರ ಮಳೆಯ ಆರ್ಭಟ ಮುಂದುವರಿದಿದ್ದು, ಜನರ ಮನೆಯಿಂದ ಹೊರಬರಲು ಪರದಾಡುವಂತಾಗಿದೆ. ಬಿರುಸಿನ ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಗಿಡಗಳು ನೆಲಕ್ಕೆ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಬೆಳಿಗ್ಗೆಯೇ ಮಳೆಯ ಸುರಿಯಲಾರಂಭಿಸಿದ್ದರಿಂದ 10 ಗಂಟೆಯಾದರೂ ಅಂಗಡಿಗಳು ತೆರಿದಿಲ್ಲ. ಅಲ್ಲದೆ ಭಾರಿ ಮಳೆಯಿಂದಾಗಿ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಜಗನ್ನಾಥ ಬಡಿಗೆರ ಅವರ ಮನೆ ನೆಲಕ್ಕುರುಳಿದೆ. ಅಲ್ಲದೆ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠ ಜಲಾವೃತ್ತಗೊಂಡಿದೆ.

ನಗರದ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದಿದ್ದು, ಕೆಲವು ಮನೆಗಳಲ್ಲಿ ನೀರು ನುಗ್ಗಿದೆ. ತಾಲ್ಲೂಕಿನ ಮಳಖೇಡ, ತೊಟ್ನಳ್ಳಿ, ಕೋಲ್ಕುಂದಾ, ಮುಧೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬೆಳಿಗ್ಗೆಯೇ ಮಳೆ ಬರಲಾರಂಭಿಸಿದ್ದರಿಂದ ವಾಹನ ಸವಾರರು ಹಾಗೂ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಸೇಡಂ 94 ಮಿ.ಮೀ, ಅಡಕಿ 63 ಮಿ.ಮೀ, ಮುಧೋಳ 72 ಮಿ.ಮೀ, ಕೋಡ್ಲಾ 38 ಮಿ.ಮೀ ಮತ್ತು ಕೋಲ್ಕುಂದಾ 96 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.