ಸೇಡಂ: ‘ಆಯೋದ್ಯಾಧಿಪತಿ ಶ್ರೀರಾಮೋತ್ಸವ ಸಮಿತಿ ವತಿಯಿಂದ ಪಟ್ಟಣದಲ್ಲಿ ಮಾ.28 ರಂದು ಶ್ರೀರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಆಯೋದ್ಯಾಧಿಪತಿ ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ವಸಂತಕುಮಾರ ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಮಧ್ಯಾಹ್ನ 3.15ಕ್ಕೆ ಕೊತ್ತಲ ಬಸವೇಶ್ವರ ದೇವಾಲಯದಿಂದ ಕರೋಡಗಿರಿ ಹನುಮಾನ ಮಂದಿರದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡೊಳ್ಳು ಕುಣಿತ, ಮಹಿಳಾ ತಂಡದವರಿಂದ ಭಜನಾ, ಯುವಕರಿಂದ ಕೋಲಾಟ, ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲ್ಲಿವೆ.

‘ಕಾರ್ಯಕ್ರಮದಲ್ಲಿ ಸುಮಾರು 1,500ಕ್ಕೂ ಹೆಚ್ಚು ಜನ ಪಾಲ್ಗೊಳ್ಳಲ್ಲಿದ್ದಾರೆ. ರಾಮೋತ್ಸವದ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದರು.

‘ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಕರೋಡಗಿರಿ ಹನುಮಾನ ಮಂದಿರದ ಬಳಿ ಸಂಜೆ 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಪಂಚಾಕ್ಷರ ಸ್ವಾಮೀಜಿ, ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಭಾಷಣಕಾರಾಗಿ ವಾಗ್ಮಿ ಶ್ರೀಕಾಂತಶೆಟ್ಟಿ ಕರ್ಕಳ, ನಿರೂಪಕಿ ಮುಮ್ತಾಜ್ ನೆಲ್ಯಡ್ಕ, ಮುಖ್ಯ ಅತಿಥಿಗಳಾಗಿ ನಟಿ ರೂಪಾ ಮನಕೂರ, ವಿಜಯ ಮಹಾಂತೇಶ, ರಾಜು ಭವಾನಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀರಾಮೋತ್ಸವ ಸಮಿತಿ ಗೌರವ ಅಧ್ಯಕ್ಷ ನರೇಂದ್ರ ರುದ್ನೂರ, ಉಪಾಧ್ಯಕ್ಷ ಕಿಶನ್ ಪವಾರ, ಬಸವಪ್ರಸಾದ್ ಅವಂಟಿ, ರಮೇಶ ನಾಯಕ, ಸಂಗಮೇಶ ಇಂಜಳ್ಳಿ, ಮಹೇಶ ಸುಬೇದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-31-1757560879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.