ಸೇಡಂ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ಸಾಗರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಪಸಾರ್ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಸಾಗರ್ ಮತ್ತು ವಿಷ್ಣುವರ್ಧನರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಬಸವರಾಜ ಸಾಗರ್ 6 ಮತ ಪಡೆದು ಗೆಲುವು ಸಾಧಿಸಿದರೆ, ವಿಷ್ಣುವರ್ಧನರೆಡ್ಡಿ 3 ಮತಗಳನ್ನು ಪಡೆದು ಪರಾಭವಗೊಂಡರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಸವರಾಜ ಪಸಾರ್ ಮತ್ತು ಶರಣಪ್ಪ ಕಾಳಾರ್ ನಾಮಪತ್ರ ಸಲ್ಲಿಸಿದ್ದರು. ಬಸವರಾಜ ಪಸಾರ್ 6 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶರಣಪ್ಪ ಕಾಳಾರ್ 3 ಮತಗಳನ್ನು ಪಡೆದು ಪರಾಭಗೊಂಡರು ಎಂದು ಚುನಾವಣಾಧಿಕಾರಿ ಸತ್ಯಕುಮಾರ ಬಾಗೋಡಿ ತಿಳಿಸಿದ್ದಾರೆ.

ಸಹಾಯಕ ಚುನಾವಣಾಧಿಕಾರಿಯಾಗಿ ಶಿವಶರಣಪ್ಪ ದೊಡ್ಡಮನಿ, ಏಣಿಕೆದಾರಾಗಿ ಶಿವಪುತ್ರ ಕಾರ್ಯನಿರ್ವಹಿಸಿದರು.

ಸರ್ಕಾರಿ ನೌಕರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕ್ರಯ್ಯಸ್ಚಾಮಿ ಇಮಡಾಪುರ, ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಪಸಾರ್, ಮಲ್ಲಪ್ಪ ಪೂಜಾರಿ, ನದೀಮ್ ಪಟೇಲ್, ಗೋಪಾಲ ಸೇಡಂಕರ್, ಲಕ್ಷ್ಮಣ ರಂಜೋಳಕರ್, ಸಕ್ರೆಪ್ಪ ಕುಂಬಾರ, ವಿಜಯಕುಮಾರ್ ಪಾಟೀಲ, ಶಿವರಾಯ ಭೋವಿ, ವಿಠ್ಠಲ ಬರಮಕರ್ ಇತರರಿದ್ದರು.

ಅವಿರೋಧ ಆಯ್ಕೆ: ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವಿವಿಧ ಸ್ಥಾನಗಳಿಗೆ ಮೇ 20 ರಂದು ಅವಿರೋಧ ಆಯ್ಕೆ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ ಪದ್ಮಾವತಿ ರೊಟ್ಟಿ, ಮಹಿಳಾ ಕ್ಷೇತ್ರದಿಂದ ಶಕುಂತಲಾ ರೊಡ್ಡಿ ತಲಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿ ಸ್ಥಾನಕ್ಕೆ ಸಾವಿತ್ರಿ ಪತ್ತಾರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ಅಲ್ಲದೆ ಖಜಾಂಚಿ ಸ್ಥಾನಕ್ಕೆ ದೇವಿಂದ್ರಪ್ಪ ದಿಗ್ಗಾಂವ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು’ ಎಂದು ಚುನಾವಣಾಧಿಕಾರಿ ಸತ್ಯಕುಮಾರ ಬಾಗೋಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-31-1598201047

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.