ಕಲಬುರಗಿ: ನಗರದ ಹಿರಿಯ ವಕೀಲ ಉಸ್ತಾದ ಸಾದತ್ ಹುಸೇನ್ (77) ಭಾನುವಾರ ನಿಧನರಾದರು.

ಅವರಿಗೆ ಪತ್ನಿ, ವಕೀಲ ಉಸ್ತಾದ್ ಝಾಕೀರ್ ಹುಸೇನ್, ಜೆಡಿಎಸ್ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಉಸ್ತಾದ ನಾಸೀರ್ ಹುಸೇನ್, ವೈದ್ಯ ಡಾ. ಉಸ್ತಾದ ತನವೀರ್ ಹುಸೇನ್ ಸೇರಿ ಐವರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾ ಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಸಾದತ್ ಹುಸೇನ್ ಅವರು 1978ರಲ್ಲಿ ಜನತಾ ಪಕ್ಷದಿಂದ, 1982 ಮತ್ತು 1994ರಲ್ಲಿ ಕಾಂಗ್ರೆಸ್ನಿಂದ ಕಲಬುರಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 1992ರಲ್ಲಿ ಕಲಬುರಗಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದರು. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷರೂ ಆಗಿದ್ದರು.

50ಕ್ಕೂ ಹೆಚ್ಚು ವರ್ಷಗಳಿಂದ ವಕೀಲಿ ವೃತ್ತಿ ನಡೆಸಿದ್ದರು. ಅವರ ಬಳಿ 700ಕ್ಕೂ ಅಧಿಕ ವಕೀಲರು ತರಬೇತಿ ಪಡೆದಿದ್ದಾರೆ. ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲು ಅವರ ನೇತೃತ್ವದಲ್ಲೆ ಹೋರಾಟ ನಡೆ ದಿತ್ತು. ಅವರು ವಕೀಲರ ಸಂಘದ ಅಧ್ಯಕ್ಷರೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.