ಅಫಜಲಪುರ: ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸರಣಿಗಳ್ಳತನ ನಡೆದಿದ್ದು, ಸುಮಾರು ₹6.5 ಲಕ್ಷ ಮೊತ್ತದ 65 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ.

ಗ್ರಾಮದಲ್ಲಿ ಮೂವರು ಕಳ್ಳರು ರಾತ್ರಿ ಮಳೆಗಾಳಿಯಿಂದ ವಿದ್ಯುತ್ ಇಲ್ಲದಿರುವ ವೇಳೆ ಬಸ್ ನಿಲ್ದಾಣದ ಹತ್ತಿರದ ಭಗವಂತರಾಯ ಹೂಗಾರ ಅವರ ಮನೆಯಲ್ಲಿ 35 ಗ್ರಾಂ ಚಿನ್ನಾಭರಣ ಮತ್ತು ₹4,500 ನಗದು ದೋಚಿದ್ದಾರೆ.

ಅರ್ಜುನ ಪೂಜಾರಿ ಅವರ ಮನೆಯಲ್ಲಿನ 20 ಗ್ರಾಂ ಚಿನ್ನಾಭರಣ, ಶಿವಶರಣಪ್ಪ ಪಾಟೀಲ ಅವರ ಮನೆಯಲ್ಲಿನ 10 ಗ್ರಾಂ ಚಿನ್ನ, 120 ಗ್ರಾಂ ಬೆಳ್ಳಿ ಮತ್ತು 4 ರೇಷ್ಮೆ ಸೀರೆ, ಸದಾನಂದ ಕಾಳಿ ಅವರ ಮನೆಯಲ್ಲಿ 3.5 ಗ್ರಾಂ ಚಿನ್ನಾಭರಣ ಕಳ್ಳತನವಾಗಿವೆ.

ಸ್ಥಳಕ್ಕೆ ಅಪರಾಧ ವಿಭಾಗದ ಪಿಎಸ್ಐ ಶಾಂತಲಿಂಗಪ್ಪ ಕಡಗಂಚಿ, ಪೊಲೀಸ್ ಕಾನ್ಸ್ಟೆಬಲ್ ಇಮಾಮಸಾಬ ಭಾಗವಾನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರೂ ಕಳ್ಳರು ಓಡಾಡುತ್ತಿರುವುದು ಸೆರೆಯಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದರಿಂದ ರೈತರು ದುಡಿದು ಬಂದು ದಣಿದು ಮಲಗಿದ್ದಾಗ ರಾತ್ರಿ ಕಳ್ಳತನ ಮಾಡುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದ್ದು, ಪೋಲಿಸ್ ಇಲಾಖೆ ಶೀಘ್ರದಲ್ಲೇ ಕಳ್ಳರನ್ನು ಬಂಧಿಸ ಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.