ಕಲಬುರಗಿ: ಆರ್ಗೆನಿಕ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ವಿಶ್ವದ ಅಗ್ರ ಶೇ 2ರಷ್ಟು ವಿಜ್ಞಾನಿಗಳ 2024ರ ಪಟ್ಟಿಯಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ರಾಸಾಯನಿಕ ವಿಜ್ಞಾನ ವಿಭಾಗದ ಶೇಷನಾಥ ವಿ. ಭೋಸಲೆ ಅವರು ಸ್ಥಾನ ಪಡೆದಿದ್ದಾರೆ. ಸತತ 5ನೇ ಬಾರಿಗೆ ಅವರ ಹೆಸರು ಪ್ರತಿಷ್ಠಿತ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಪಬ್ಲಿಶಿಂಗ್ ಗ್ರೂಪ್ನ ತಜ್ಞರು ವಿವಿಧ ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜಗತ್ತಿನ ಅಗ್ರಗಣ್ಯ ಶೇ 2ರಷ್ಟು ವಿಜ್ಞಾನಿಗಳ ಪಟ್ಟಿಯನ್ನು ಈಚೆಗೆ ಪ್ರಕಟಿಸಿದ್ದಾರೆ. ಪ್ರಕಟಣೆಗಳು, ಉಲ್ಲೇಖಗಳು, ಎಚ್–ಸೂಚ್ಯಂಕ ಮತ್ತು ಸಂಶೋಧನೆಯ ವಾಹಕದ ದೀರ್ಘ ಪ್ರಭಾವಕ್ಕಾಗಿ ಸಂಯೋಜಿತ ಸೂಚಕದ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಿದ್ದಾರೆ.

ಪ್ರೊ.ಶೇಷನಾಥ ವಿಶ್ವನಾಥ ಭೋಸಲೆ ಅವರು 300ಕ್ಕೂ ಹೆಚ್ಚು ಪೀರ್–ರಿವ್ಯೂಡ್ ಸಂಶೋಧನಾ ಪ್ರಬಂಧಗಳನ್ನು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹತ್ತು ಸಾವಿರಕ್ಕೂ ಉಲ್ಲೇಖಗಳು ಮತ್ತು ಎಚ್–ಇಂಡೆಕ್ಸ್ 45ನೊಂದಿಗೆ ಪ್ರಕಟಿಸಿದ್ದಾರೆ. ಅವರು 15 ಪುಸ್ತಕ ಅಧ್ಯಾಯಗಳನ್ನು ಪ್ರಕಟಿಸಿದ್ದಾರೆ. ಒಂದು ಪುಸ್ತಕವನ್ನು ಸಂಪಾದಿಸಿದ್ದಾರೆ. 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಜರ್ನಲ್ಗಳ ವಿಮರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಸಾಧನೆಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.