ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಸಂರಕ್ಷಣೆಗೆ ಸೇವಾಲಾಲರ ಕೊಡುಗೆ ಅಪಾರ; ಸುಭಾಷ್ ರಾಠೋಡ

Last Updated 16 ಮಾರ್ಚ್ 2022, 2:13 IST
ಅಕ್ಷರ ಗಾತ್ರ

ಚಿಂಚೋಳಿ: ‘ಪ್ರಕೃತಿಯ ಆರಾಧನೆ, ಸಂರಕ್ಷಣೆ ಮತ್ತು ಪೂಜಿಸುವ ಮೌಲ್ಯವನ್ನು ಸೇವಾಲಾಲರು ಬಂಜಾರಾ ಜನರಿಗೆ ನೀಡಿದ್ದಾರೆ. ಅವರ ತತ್ವದಂತೆ ಇಂದಿಗೂ ಬಂಜಾರಾ ಜನರು ಕಾಡುಮೇಡುಗಳ ಸಂರಕ್ಷಣೆಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ತಿಳಿಸಿದರು.

ತಾಲ್ಲೂಕಿನ ಶಾದಿಪುರದಲ್ಲಿ
ಮಂಗಳವಾರ ಸುತ್ತಲಿನ ತಾಂಡಾಗಳ ಜನರು ಸೇರಿ ಆಯೋಜಿಸಿದ್ದ ಸಂತ ಸೇವಾಲಾಲ ಮಹಾರಾಜರ 283ನೇ ಜಯಂತ್ಯುತ್ಸವದಲ್ಲಿ
ಮಾತನಾಡಿದರು.

ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಜಾಧವ ಅವರು ಸೇವಾಲಾಲ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಗೊಬ್ಬೂರುವಾಡಿಯ ಸೇವಾಲಾಲ ಶಕ್ತಿಪೀಠದ ಬಳಿರಾಮ ಮಹಾರಾಜ ದಿವ್ಯ ಸಾನಿಧ್ಯವಹಿಸಿದ್ದರು.

ಸಮಾರಂಭದಲ್ಲಿ ಅಶೋಕ ಚವ್ಹಾಣ, ವಿಜಯಕುಮಾರ ರಾಠೋಡ್, ಪ್ರೇಮಸಿಂಗ್ ಜಾಧವ,
ಕಾಂಗ್ರೆಸ್ ಅಧ್ಯಕ್ಷ ಬಸವರಾಜ
ಮಾಲಿ, ಮುಖಂಡ ಡಾ. ತುಕಾರಾಮ ಪವಾರ, ಬೆಡಸೂರಿನ ರಾಜು
ಜಾಧವ, ತುಳಸಿರಾಮ ಜಾಧವ, ಉಮಾಪತಿ, ಗುರುನಾಥ ಪಟೇಲ್, ವಿಕ್ರಮ ಚವ್ಹಾಣ, ಸುರೇಶ
ಜಾಧವ, ರಾಮ್ಲು, ಚಂದರ್ ಕಾರಭಾರಿ, ವಸಂತ ರಾಠೋಡ್, ರವೀಂದ್ರ ಕಾರಭಾರಿ, ಶಂಕರ ಮಾಸ್ಟರ್, ಹೀರಾಲಾಲ ರಾಠೋಡ್, ಗ್ರಾ.ಪಂ. ಅಧ್ಯಕ್ಷೆ ರೇಖಾ ರಮೇಶ, ಉಪಾಧ್ಯಕ್ಷ ದಶರಥ ಕಾವಲಿ, ಸದಸ್ಯರಾದ ಶಹಾಜಿರಾವ್, ಸಂಜೀವ ಪವಾರ, ವೆಂಕಟಿ, ತುಕಾರಾಮ, ಶಿವಾಜಿ, ಸಂತೋಷ ಭಜನಸಿಂಗ್, ವಿಠಲ್, ಸುಧಾ, ಜಗನ್, ವಿಕ್ರಮ ಚವ್ಹಾಣ
ಸೇರಿದಂತೆ ಸಮಾಜದ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT