ಬುಧವಾರ, 20 ಮೇ 2026
×
ADVERTISEMENT

24 ವರ್ಷಗಳ ಹೋರಾಟ | ಮಂಜೂರಾದ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ: ಸಂತ್ರಸ್ತರ ದೂರು

Published : 29 ಏಪ್ರಿಲ್ 2026, 23:59 IST
Last Updated : 30 ಏಪ್ರಿಲ್ 2026, 6:25 IST
ADVERTISEMENT
ಫಾಲೋ ಮಾಡಿ
Comments
24 ವರ್ಷಗಳ ಹಿಂದೆ ನಮಗೆ ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯ ನಿರ್ದೇಶನದ ಮೇರೆಗೆ ಶಾದಿಪುರದ ಸ.ನಂ. 1263ರಲ್ಲಿ 3.30 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ಇದು ಕಾಗದಕ್ಕೆ ಸೀಮಿತವಾಗಿದೆ. ಸ್ವಂತ ಭೂಮಿಯ ಕನಸು ಇನ್ನೂ ನನಸಾಗಿಲ್ಲ
ಪ್ರಭಾವತಿ, ಮಾಜಿ ಸೈನಿಕ ಬಸವಯ್ಯ ಅವರ ಪತ್ನಿ
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಮಧ್ಯೆ ಗಡಿ ವಿವಾದದಿಂದ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಅಂತರರಾಜ್ಯ ಗಡಿ ನಿರ್ಧರಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಪತ್ರ ಬರೆದಿದ್ದಾರೆ. ವಿವಾದ ಸಚಿವರ ಮತ್ತು ಮೇಲಧಿಕಾರಿಗಳ ಗಮನಕ್ಕೂ ಬಂದಿದೆ
ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ್ ಚಿಂಚೋಳಿ
ಪಿಎಂ ಕಚೇರಿ ಪತ್ರಕ್ಕೂ ಸಿಗದ ಬೆಲೆ!
ತಮ್ಮ ಜಮೀನು ಅಳತೆ ಮಾಡಿಕೊಡುವಂತೆ ಫಲಾನುಭವಿಗಳಾದ ಮಾಜಿ ಸೈನಿಕ ಯು.ಬಸವಯ್ಯಸ್ವಾಮಿ ಅವರು ಚಿಂಚೋಳಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ₹ 1400 ಶುಲ್ಕ ಭರಿಸಿ ತಮಗೆ ಮಂಜೂರಾದ ಭೂಮಿಯ ಅಳತೆ ಮಾಡಿಕೊಡಲು ಅರ್ಜಿ ಸಲ್ಲಿಸಿದರೆ, ಅಳತೆ ಮಾಡಿಕೊಡಬೇಕಾದ ಅಧಿಕಾರಿಗಳು ಇದು ‘ಖರಾಬ್‌’ ಜಮೀನು ಎಂದು ಹೇಳಿ ಕೈತೊಳೆದುಕೊಂಡಿ ದ್ದಾರೆ. ಈ ಕುರಿತು 2019 ಜ.23ರಂದು ಅರ್ಜಿದಾರರಿಗೆ ಹಿಂಬರಹ ನೀಡಿದ್ದಾರೆ. ಅರ್ಜಿದಾರರು ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯ ಮೊರೆಹೋದಾಗ, ವಿವಾದಿತ ಜಮೀನು ಬಿಟ್ಟು ಬೇರೆ ಕಡೆ ಜಮೀನು ಮಂಜೂರು ಮಾಡಲು 2019ರಲ್ಲಿಯೇ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳು ಸಹಿತ ಅಧೀನ ಅಧಿಕಾರಿಗೆ ಪತ್ರ ಬರೆದು 7 ವರ್ಷ ಗತಿಸುತ್ತಿದ್ದರೂ ಕಡತ ಯಾವುದೇ ಪ್ರಗತಿ ಕಂಡಿಲ್ಲ. ‘2020ರಲ್ಲಿ ಅರ್ಜಿದಾರರು ಪ್ರಧಾನ ಮಂತ್ರಿ ಕಚೇರಿಗೂ ಪತ್ರ ಬರೆದು ಸಮಸ್ಯೆ ಕುರಿತು ಕೋರಿಕೊಂಡಾಗ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿಯ ಶಾಖಾಧಿಕಾರಿ ಆಶಿಶಕುಮಾರ ಮಿಶ್ರಾ ಅವರು ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ಮತ್ತು ತಮ್ಮ ಕಚೇರಿಗೆ ಕೈಗೊಂಡ ಕ್ರಮದ ವರದಿ ಸಲ್ಲಿಸಲು ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮಾಜಿ ಸೈನಿಕ ಯು.ಬಸವಯ್ಯಸ್ವಾಮಿ ಅವರ ಪತ್ನಿ ಪ್ರಭಾವತಿ ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT