ಶಹಾಬಾದ್: ‘ಡಾ.ಅಂಬೇಡ್ಕರ್ ಅವರು ನಮ್ಮೆಲ್ಲರಿಗೆ ಸ್ವಾಭಿಮಾನದ ಬದುಕು ಕೊಟ್ಟಿದ್ದಾರೆ. ನಮ್ಮೆಲ್ಲರ ನಗುವಿನ ಹಿಂದೆ ಬಾಬಾ ಸಾಹೇಬರ ನೋವು, ಕಷ್ಟ ಇದ್ದು, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪಂಡಿತ ಬಿ.ಕೆ.ಹೇಳಿದರು.

ಅವರು ಬುಧವಾರ ಹೊನಗುಂಟಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಪಾಟೀಲ ಅವರು ಬುದ್ಧ–ಬಸವ–ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಡೀನ್ ವಿಜಯಕುಮಾರ ಸಾಲಿಮನಿ ಮಾತನಾಡಿದರು. ವಾಡಿಯ ಸಿದ್ಧಾರ್ಥ ಬುದ್ಧ ವಿಹಾರದ ಭಿಕ್ಕು ಅರ್ಚಸ್ಮತಿ ಸಾನ್ನಿಧ್ಯ ವಹಿಸಿದ್ದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಪೀರಪಾಶಾ, ಭೀಮಶಂಕರ ಖೇಣಿ, ಮರೆಪ್ಪ ಮೇತ್ರೆ, ದೇವಿಂದ್ರ ಕಾರೊಳ್ಳಿ, ಮಹಿಬೂಬ್ ಪಟೇಲ್, ಕೃಷ್ಣಪ್ಪ ಕರಣಿಕ, ಮಹಾದೇವ ತರನಳ್ಳಿ, ಮಲ್ಲಣ್ಣ ಮರತೂರ, ಸತೀಷ ಕೋಬಾಳ, ಮಾರ್ತಾಂಡಪ್ಪ ಬುರ್ಲಿ, ಸುರೇಶ ಕುಂಬಾರ, ಮಲ್ಕಪ್ಪ ಮುದ್ದಾ, ಸಾಬಣ್ಣ ಕೊಲ್ಲೂರ, ವಿಶ್ವರಾಜ ಫಿರೋಜಾಬಾದ್ ಸೇರಿದಂತೆ ಇತರರು ಇದ್ದರು.

ಮಹಾದೇವ ಮೇತ್ರಿ ಸ್ವಾಗತಿಸಿದರು. ಪಿ.ಎಸ್.ಮೇತ್ರೆ ನಿರೂಪಿಸಿದರು. ಜೈಭೀಮ ರಸ್ತಾಪುರ ವಂದಿಸಿದರು.

ಕೃಷ್ಣಪ್ಪ ಕರಣಿಕ, ಶಿವಯೋಗಿ ಮೇತ್ರಿ, ಮಲ್ಲಣ್ಣ ಮಸ್ಕಿ, ತಿಪ್ಪಣ್ಣ ಧನೇಕರ್, ರಾಕೇಶ ಜಾಯಿ ಅವರು ಕ್ರಾಂತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ಡಾ.ಅಂಬೇಡ್ಕರ್ ಅವರ ಮೂರ್ತಿ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-31-160311391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.