ಶಹಾಬಾದ್: ನಗರದಲ್ಲಿ ಚಪ್ಪಲಿ ವ್ಯಾಪಾರಿಯೊಬ್ಬರು ಧಮ್ಮಚಕ್ರದ ಚಿಹ್ನೆ ಇರುವ ಚಪ್ಪಲಿಗಳನ್ನು ಮಾರಾಟಕ್ಕೆ ಇಟ್ಟಿರುವುದನ್ನು ಕಂಡು ದಲಿತ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಂಜಾನ್ ಪ್ರಯುಕ್ತ ಶುಕ್ರವಾರ ಸಂಜೆ ಭಾರಿ ಪ್ರಮಾಣದಲ್ಲಿ ಚಪ್ಪಲಿ ಮಾರಾಟ ನಡೆಯುತ್ತಿತ್ತು. ಈ ವೇಳೆ ಧಮ್ಮಚಕ್ರದ ಚಿಹ್ನೆ ಇರುವ ಚಪ್ಪಲಿಗಳು ಕಂಡುಬಂದಿವೆ. ದಲಿತ ಸಂಘಟನೆ ಮುಖಂಡರು ದೂರು ನೀಡಿದ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಅಂತಹ ಎಲ್ಲಾ ಚಪ್ಪಲಿಗಳನ್ನು ಮುಟ್ಟುಗೋಲು ಹಾಕಿ, ಅಂಗಡಿ ಮಾಲೀಕನಿಗೆ ಎಚ್ಚರಿಕೆ ನೀಡಿದ್ದಾರೆ.

ಈ ರೀತಿ ಚಿಹ್ನೆ ಹೊಂದಿರುವ ಚಪ್ಪಲಿಗಳ ಹಿಂಭಾಗದಲ್ಲಿ ‘ಮೇಡ್ ಇನ್ ಚೀನಾ’ ಎಂದು ಮುದ್ರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಎಎಸ್ಪಿ ಮಹೇಶ ಮೇಘಣ್ಣವರ ಶನಿವಾರ ನಗರಕ್ಕೆ ಭೇಟಿನೀಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ಪರಶುರಾಮ ವನಂಜಕರ ಅವರಿಂದ ಮಾಹಿತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.