ಶಹಾಬಾದ್: ‘ದೇಶದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಬಂಡವಾಳಶಾಹಿ ಕ್ರೂರ ವ್ಯವಸ್ಥೆಗೆ ಅಂತ್ಯಹಾಡಲು ದುಡಿಯುವ ವರ್ಗ ಸಮಾಜವಾದಿ ಕ್ರಾಂತಿಯನ್ನು ಸಂಘಟಿಸುವುದರ ಮೂಲಕ ಅಧಿಕಾರಕ್ಕೆ ಬರಬೇಕಾಗಿದೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಶಶಿಧರ ಹೇಳಿದರು.

ಶಹಾಬಾದ್ನ ಹನುಮಾನ ನಗರದಲ್ಲಿ ಪಕ್ಷದ 78ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

‘ದೇಶವು 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರಗೊಂಡರೂ ನಿಜವಾದ ಸ್ವಾತಂತ್ರ್ಯ ದುಡಿಯುವ ವರ್ಗಕ್ಕಾಗಲಿ, ಜನಸಾಮಾನ್ಯರಿಗಾಗಲಿ ದೊರಕಲಿಲ್ಲ. ಇದನ್ನು ಅರ್ಥೈಸಿಕೊಂಡ ಶಿವದಾಸ ಘೋಷ್ ಅವರು 1948ರಲ್ಲಿ ಕಲವೇ ಕೆಲವು ಸಂಗಾತಿಗಳೊಂದಿಗೆ ಎಸ್ಯುಸಿಐ (ಸಿ) ಪಕ್ಷವನ್ನು ಸ್ಥಾಪಿಸಿದರು’ ಎಂದು ಹೇಳಿದರು.

‘ಸಿಪಿಐ, ಸಿಪಿಐ (ಎಂ)ಗಳಂತಹ ನಾಮಮಾತ್ರ ಕಮ್ಯುನಿಸ್ಟ್ ಪಕ್ಷಗಳು ಹೋರಾಟದ ದಾರಿ ಬಿಟ್ಟು ಚುನಾವಣಾ ರಾಜಕೀಯದಲ್ಲಿ ಮುಳುಗಿವೆ. ಚುನಾವಣೆಗಳಿಂದ ದೇಶದಲ್ಲಿ ಮೂಲಭೂತ ಬದಲಾವಣೆ ಅಸಾಧ್ಯ ಎಂದು ಒತ್ತಿ ಹೇಳುತ್ತಾ, ಭಾರತವು ಎದುರಿಸುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರ, ಬಡತನದಂತಹ ಸಮಸ್ಯೆಳಿಂದ ಮುಕ್ತಿ ಹಾಗೂ ಪರಿಹಾರಗೊಳ್ಳಬೇಕಾದರೆ ಜನರ ಐಕ್ಯಹೋರಾಟದ ಮೂಲಕ ಸಾಧ್ಯ’ ಎಂದದರು.

ಮುಖ್ಯಅತಿಥಿಯಾಗಿ ಎಸ್ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದಶಿ ಆರ್.ಕೆ.ವೀರಭದ್ರಪ್ಪ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವದಾಸ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಶಹಾಬಾದ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಗಣಪತರಾವ ಕೆ.ಮಾನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪೂರ, ಸ್ಥಳೀಯ ಸಮಿತಿ ಸದಸ್ಯ ರಾಘವೇಂದ್ರ.ಎಂ.ಜಿ., ಪಕ್ಷದ ಸದಸ್ಯರಾದ ಜಗನ್ನಾಥ ಎಸ್.ಎಚ್., ಗುಂಡಮ್ಮ ಮಡಿವಾಳ, ಭಾಗಣ್ಣ ಬುಕ್ಕಾ, ರಾಜೇಂದ್ರ ಆತ್ನೂರ್, ನೀಲಕಂಠ ಹುಲಿ, ರಮೇಶ ದೇವಕರ್, ಮಹಾದೇವಿ ಮಾನೆ, ರಘು ಪವಾರ, ಅಂಬಿಕಾ ಗುರಜಾಲಕರ್, ಬಾಬು ಪವಾರ, ಅಜಯ ಗುರಜಾಲಕರ್, ತಿಮ್ಮಣ್ಣ ಮಾನೆ ಮುಂತಾದವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-31-925291976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.