ಶಹಾಬಾದ್: ‘ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತೊಗರಿ ಚೀಲ, ನಗದು ಹಾಗೂ ಕಬ್ಬಿಣದ ಗ್ರಿಲ್ ಕಳವಿನ ಪ್ರತ್ಯೇಕ ಪ್ರಕರಣಗಳ ಒಟ್ಟು 11 ಆರೋಪಿಗಳನ್ನು ವಶಕ್ಕೆ ಪಡೆದು, ಒಟ್ಟು ₹ 10.85 ಲಕ್ಷ ಕಿಮ್ಮತ್ತಿನ ವಸ್ತು ಹಾಗೂ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರತಿಳಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾ. 23ರಂದು ಹೊನಗುಂಟಾ ನಿವಾಸಿ ನಾಗಪ್ಪ ಗುಡುಬಾ ಅವರು ದಂಡಗುಂಡ ಬಸವೇಶ್ವರ ಟ್ರೇಡಿಂಗ್ ಕಂಪನಿಯ ಗೋದಾಮಿನ ಕೀಲಿ ಮುರಿದು ಸುಮಾರ ₹ 2.40 ಲಕ್ಷ ಮೌಲ್ಯದ 40 ತೊಗರಿ ಚೀಲ ಕಳವು ಮಾಡಲಾಗಿದೆ’ ಎಂದು ದೂರು ನೀಡಿದ್ದರು.

‘ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡು ಮಾರ್ಚ್ 30ರಂದು ಶಹಾಬಾದ್ ನಿವಾಸಿಗಳಾದ ಉಮೇರ್ ಅಲಿ ಮೊರಟಗಿ, ಪೂರ್ಖಾನ್ ರಹಿಮಖಾನ್, ಅಸೀಫ್ ಬಾಬುಮಿಯಾ, ಚಾಂದ ಪಾಷಾ ಮಹಿಬೂಬ, ಭಂಕೂರನ ಸುಭಾಷ ಮಡಿವಾಳ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ₹ 2.40 ಲಕ್ಷ ಮೌಲ್ಯದ 40 ತೊಗರಿ ಚೀಲ, ಕೃತ್ಯಕ್ಕೆ ಬಳಸಿದ ₹ 4 ಲಕ್ಷ ಮೌಲ್ಯದ ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ವಾಹನ, ₹ 60 ಸಾವಿರ ಮೌಲ್ಯದ ಸ್ಕೂಟರ್ ಸೇರಿದಂತೆ ಒಟ್ಟು ₹ 7 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.

ಹಣ ಕಳವು: ಭಂಕೂರನ ಶಾಂತನಗರ ನಿವಾಸಿ ಜಾಫರ್ ಯಾದಗಾರ ಎಂಬುವವರು ಫೆ.15ರಂದು ನಗರದ ಸಾರಡಾ ಬಟ್ಟೆ ಅಂಗಡಿ ಹತ್ತಿರ ಟಂಟಂ ವಾಹನದಲ್ಲಿ ಇಟ್ಟಿದ್ದ ₹1.35 ಲಕ್ಷ ನಗದು ಕಳುವಾದ ಕುರಿತು ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಚಾಲಕರನ್ನು ಪತ್ತೆ ಮಾಡಿ, ಅವರಿಂದ ₹1.35 ಲಕ್ಷ ವಶಪಡಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಕಬ್ಬಿಣದ ಗ್ರಿಲ್ ಕಳವು: ವಿಜ್ಞಾನೇಶ್ವರ ಮಂಗಲ ಕಾರ್ಯಾಲಯದ ತಡೆಗೋಡೆ ಮೇಲಿದ್ದ ₹50 ಸಾವಿರ ಮೌಲ್ಯದ ಕಬ್ಬಿಣದ ಗ್ರಿಲ್ ಕಳುವಾಗಿರುವ ಕುರಿತು ಮರತೂರಿನ ಶರಣಬಸಪ್ಪ ಪಾರಗಂಡ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಮರತೂರ ಗ್ರಾಮದ ಪ್ರಲ್ಹಾದ ಬಾಬು ಸಿಂಧೆ, ಪ್ರಲ್ಹಾದ ಪ್ರೇಮಕುಮಾರ ಕಂಬಾನೂರ, ಪ್ರಮೋದ ಪ್ರೇಮಕುಮಾರ ಕಂಬಾನೂರ, ಪ್ರೀತಮ್ ಪ್ರಕಾಶ ಫರತಾಬಾದ್ ಅವರನ್ನು ವಶಕ್ಕೆ ಪಡೆದು, ಅವರಿಂದ ₹ 50 ಸಾವಿರ ಮೌಲ್ಯದ ಕಬ್ಬಿಣದ ಗ್ರೀಲ್, ಕೃತ್ಯಕ್ಕೆ ಬಳಸಿದ ₹ 2 ಲಕ್ಷ ಮೌಲ್ಯದ ಎರಡು ಅಟೊಗಳು ಸೇರಿದಂತೆ ಒಟ್ಟು ₹ 2.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ಪಿ.ಎಸ್.ವನಂಜಕರ್, ಪಿಎಸ್ಐ ಶಾಮರಾಯ, ಚಂದ್ರಕಾಂತ ಮೆಕಾಲೆ, ಎಸ್ಐ ಮಲ್ಲಿಕಾರ್ಜುನ, ಸಿಬ್ಬಂದಿಯಾದ ದೊಡ್ಡಪ್ಪ, ನಾಗೇಂದ್ರ ತಳವಾರ, ಸಂತೋಷ, ಹುಸೇನ ಪಾಷಾ, ಬಿ.ಎ.ಒಡೆಯರ ತನಿಖಾ ತಂಡದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-34-1831180564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.