ಶಹಾಬಾದ್: ತಾಲ್ಲೂಕಿನ ತೊನಸನಳ್ಳಿ(ಎಸ್) ಗ್ರಾಮದಿಂದ ಹಾದು ಹೋಗುವ ರಾಜ್ಯ ಹೆದ್ದಾರಿಯನ್ನು ನಿರ್ಮಿಸಲು ಆಗ್ರಹಿಸಿ ಗ್ರಾಮಸ್ಥರು ಹಮ್ಮಿಕೊಂಡಿರುವ ರಸ್ತೆ ತಡೆ ಪ್ರತಿಭಟನೆಯ ಎರಡನೇ ದಿನದಂದು ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅವರು ಭೇಟಿ ನೀಡಿದರು.

ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಶಾಸಕರೊಂದಿಗೆ ಚರ್ಚಿಸಿ ಕೆಕೆಆರ್ಡಿಬಿಯಿಂದ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಲು ಅವಕಾಶವಿದ್ದು, ಶೀಘ್ರದಲ್ಲಿ ರಸ್ತೆ ನಿರ್ಮಿಸುವ ಹಾಗೆ ಕ್ರಮ ಕೈಗೊಳ್ಳುತ್ತೇನೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಕೆಲ ಅಧಿಕಾರಿಗಳು ಗ್ರಾಮದ ಮುಖಂಡರ ಜೊತೆ ತಕ್ಷಣ ಸಭೆಯನ್ನು ಕರೆದು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲು ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಕೆಲವು ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗದಿದ್ದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಹೇಳಿದರು ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು. ರಸ್ತೆ ನಿರ್ಮಾಣ ಆಗೋವರೆಗೆ ಅತಿ ಭಾರವಾದ ವಾಹನಗಳನ್ನು ಸಂಚರಿಸಿದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪ್ರತಿಭಟನೆಗೆ ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ಚರಂತೇಶ್ವರ ಶಿವಚಾರ್ಯರು, ಅಲ್ಲಂಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಮಹಾರಾಜರು, ಕೊಟ್ಟೂರೇಶ್ವರ ಸ್ವಾಮಿಗಳು ಹಾಗೂ ದಿವ್ಯ ಹಾಗರಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಗಮಿಸಿ ಬೆಂಬಲವನ್ನು ಸೂಚಿಸಿದರು.

ಗ್ರಾಮದ ಮುಖಂಡರಾದ ಬಸವರಾಜ ಜಿ ಗೋಳೇದ, ಬಸವರಾಜ ಮದ್ರಿಕಿ, ಬೆಳ್ಳಪ್ಪ ಕಣದಾಳ, ಮಹೇಶ ಬಂದಳ್ಳಿ, ಮಲ್ಲಿಕಾರ್ಜುನ ಗೊಳೇದ್, ಸಂಗನಗೌಡ ಬೊಮ್ಮಶೆಟ್ಟಿ, ಸಿದ್ದು ಸಜ್ಜನ್, ಪ್ರಭು ಮಂಗಳೂರು, ನಾಗೇಂದ್ರ ಹುಗ್ಗಿ, ವಿದ್ಯಾಧರ ಹುಗ್ಗಿ, ಸಂಗನಗೌಡ ರಾಮಶೆಟ್ಟಿ, ರಾಜಶೇಖರ ಮರಗಳು ಸೇರಿದಂತೆ ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಿಐ ಪರಶುರಾಮ ವನಂಜಕರ ಪೊಲೀಸ್ ಬಂದೋಬಸ್ತ್ ಒದಗಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-31-883928452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.