ಕಲಬುರಗಿ: ‘ಶಿವಸೇನಾ ಪಕ್ಷದಿಂದ ಬಾಳಾ ಠಾಕ್ರೆ ಜಯಂತಿ ನಿಮಿತ್ತ ಪಕ್ಷದ ಬಲವರ್ಧನೆ ಮತ್ತು ಸಂಘಟನೆಗಾಗಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಜನ ಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು, ಶುಕ್ರವಾರ ಚಾಲನೆ ನೀಡಲಾಗಿದೆ’ ಎಂದು ಶಿವಸೇನಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

‘ಮೊದಲಿಗೆ ಕಲಬುರಗಿ ದಕ್ಷಿಣದ 28 ಹಳ್ಳಿಗಳಲ್ಲಿ ಮೂರು ದಿನದ ಪ್ರವಾಸ ಆರಂಭವಾಗಿದೆ. ಪ್ರತಿದಿನ 10 ಹಳ್ಳಿಯಂತೆ ಬೆಳಿಗ್ಗೆ ಮತ್ತು ಸಂಜೆ ಜನರಿಗೆ ಶಿವಸೇನಾ ಪಕ್ಷದ ನಿಲುವು ತಿಳಿಸಲಾಗುವುದು. ರಾಷ್ಟ್ರದ ಸದೃಢತೆಗಾಗಿ ರೈತರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ರ್ಯಾಲಿ ನಡೆಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಭಿಯಾನದಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುತ್ತೇವೆ. ಹಿಂದಿನ ಮತ್ತು ಪ್ರಸ್ತುತ ಶಾಸಕರು ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು, ಬೀದಿದೀಪ, ಚರಂಡಿ ಸೇರಿ ಏನೇನು ಅಭಿವೃದ್ಧಿ ಮಾಡಿದ್ದಾರೆ ಎನ್ನುವ ವರದಿ ಸಂಗ್ರಹಿಸುತ್ತೇವೆ. ಇದರೊಂದಿಗೆ ನಮ್ಮ ತಂಡ ಸಂಬಂಧಪಟ್ಟ ಇಲಾಖೆಯ ಕಚೇರಿಗಳಿಗೆ ಹೋಗಿ, ಏಕೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಪ್ರಶ್ನಿಸುತ್ತೇವೆ. ಇದೇ ರೀತಿ ಕಲಬುರಗಿ ನಗರದಲ್ಲಿ ಮೂರು ದಿನ ಅಭಿಯಾನ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಶಿವಸೇನಾ ಪಕ್ಷ ರಾಜ್ಯದ 12 ಜಿಲ್ಲೆಗಳಲ್ಲಿ ಪಸರಿಸಿದೆ. ಫೆ.7ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತಿದ್ದು, ಸುಮಾರು 500 ಜನ ಪಕ್ಷವನ್ನು ಸೇರುತ್ತಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ರಾಕೇಶ್ ಜಮಾದಾರ, ಮಲಕಣ್ಣ ಹಿರೇಪೂಜಾರಿ, ರೋಹಿತ್ ಪಿಸ್ಕೆ ಇದ್ದರು.

‘ಕಲಬುರಗಿಯಲ್ಲೂ ಇದ್ದಾರೆ ಬಾಂಗ್ಲಾ ನುಸುಳುಕೋರರು’

‘ಕಲಬುರಗಿ ಜಿಲ್ಲೆಯಲ್ಲೂ 4 ಸಾವಿರದಿಂದ 10 ಸಾವಿರ ಜನ ಬಾಂಗ್ಲಾ ನುಸುಳುಕೋರರಿದ್ದಾರೆ. ಯಾವ ಪ್ರದೇಶದಲ್ಲಿದ್ದಾರೆ ಎಂಬ ಬಗ್ಗೆ ನಮ್ಮ ಸಂಘಟನೆಯವರು ಪೊಲೀಸ್ ಕಮಿಷನರ್ಗೆ ದೂರು ಕೂಡ ಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ಒಂದೇ ಒಂದು ಹಿಂಬರಹ ಕೊಡುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಲಕ್ಷ್ಯ ವಹಿಸಬೇಕು’ ಎಂದು ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು. ‘ನಮ್ಮ ರಾಜ್ಯದಲ್ಲಿ ಬಾಂಗ್ಲಾದೇಶದ 20 ಲಕ್ಷ ನುಸುಳುಕೋರರು ಇದ್ದಾರೆ ಎಂಬ ವರದಿ ಬಂದಿದೆ. ಸುಮಾರು 30 ವರ್ಷಗಳಿಂದ ಶೇ 80ರಷ್ಟು ಜನ ಪಡಿತರ ಚೀಟಿ ಆಸ್ತಿ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಗಂಡಾಂತರ ತಪ್ಪಿದ್ದಲ್ಲ’ ಎಂದರು. ‘ಬಾಂಗ್ಲಾ ನುಸುಳುಕೋರರನ್ನು ಕೂಡಲೇ ಆಸ್ಸಾಂ ಗುಜರಾತ್ ಪಶ್ಚಿಮಬಂಗಾಳ ಮಾದರಿಯಲ್ಲಿ ಹೊರದಬ್ಬಬೇಕು. ಇದು ರಾಜ್ಯ ಸರ್ಕಾರದ ಕರ್ತವ್ಯ. ಇದರ ಬಗ್ಗೆ ಯಾರಾದರೂ ಮಾತನಾಡಿದರೆ ನಮ್ಮ ಕಲಬುರಗಿ ಉಸ್ತುವಾರಿ ಮಂತ್ರಿಗಳು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎನ್ನುತ್ತಾರೆ. ಕೇಂದ್ರದವರು ನಿರ್ಲಕ್ಷ್ಯ ವಹಿಸಿದರೆ ರಾಜ್ಯದಲ್ಲಿ ಸದೃಢವಾಗಿರುವ ನೀವ್ಯಾಕೆ ಇಲ್ಲಿ ಅವರ ಪಾಲನೆ ಪೋಷಣೆ ಮಾಡುತ್ತಿದ್ದೀರಿ? ವಿಷಸರ್ಪಗಳಿಗೆ ಹಾಲೆರೆಯುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.