ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಎಲ್ಲೆಡೆ ಶಿವನಾಮ ಸ್ಮರಣೆ, ವಿಶೇಷ ಪೂಜೆ

Last Updated 2 ಮಾರ್ಚ್ 2022, 3:49 IST
ಅಕ್ಷರ ಗಾತ್ರ

ಚಿಂಚೋಳಿ: ಅವಳಿ ಪಟ್ಟಣಗಳಾದ ಚಿಂಚೋಳಿ ಚಂದಾಪುರದ ಆರಾಧ್ಯ ದೈವ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಯಲ್ಲಿ ಜನರು ಪಂಚಲಿಂಗಗಳ‌ ದರ್ಶನ ಪಡೆಯುವ ಮೂಲಕ‌ ಮಹಾಶಿವರಾತ್ರಿಯನ್ನು ಭಕ್ತಿ ಶ್ರದ್ದೆಯಿಂದ ಮಂಗಳವಾರ ಆಚರಿಸಿದರು.

ಎರಡೂ ಪಟ್ಟಣ ಮತ್ತು ಸುತ್ತಲಿನ ಹಳ್ಳಿಗಳ ಜನರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಆಚರಿಸಿದರೆ, ಸಂಜೆ ಹೊತ್ತಿಗೆ ಮನೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡಿಕೊಂಡು‌ ನಂತರ ಪಂಚಲಿಂಗಗಳ ಬುಗ್ಗೆಯ ಶಿವ ಲಿಂಗಗಳ ದರ್ಶನ ಮಾಡಿ ನೈವೇದ್ಯ ಸಮರ್ಪಿಸಿ ಉಪವಾಸಕ್ಕೆ
ತೆರೆ ಎಳೆದರು.

ಬುಗ್ಗೆ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಆದ್ಯತೆ ಮೇಲೆ ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಾಗುವುದು ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದರು.

ಬೆಳಿಗ್ಗೆ ಅಭಿಷೇಕ, ಹೋಮ ಹವನ ಹಾಗೂ ಬ್ರಹ್ಮ ಕುಮಾರಿ ಈಶ್ವರೀಯ ವಿವಿಯ ಚಿತ್ರಪಟ ಪ್ರದರ್ಶನ, ಸಂಗೀತ ಸುಧೆ ಹಾಗೂ ರಾತ್ರಿ ಭಜನೆ ಕಾರ್ಯಕ್ರಮ ನಡೆಸಲಾಯಿತು. ಶಾಸಕ ಡಾ.ಅವಿನಾಶ ಜಾಧವ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ.ವಿಕ್ರಮ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ರಾಮಚಂದ್ರ ಜಾಧವ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಗಡಂತಿ, ಡಾ.ಕಿಶನರಾವ ಕಾಟಾಪುರ, ಅಶೋಕ ಪಾಟೀಲ, ಮಧುಸೂದನ ಕಾಟಾಪುರ, ಜಗನ್ನಾಥ ಅಗ್ನಿ ಹೋತ್ರಿ, ರೇವಣಸಿದ್ದಪ್ಪ ದಾದಾಪುರ, ಮಲ್ಲಿಕಾರ್ಜುನ ಚಿಂಚೋಳಿ, ನರಸಣ್ಣ ನಾಟಿಕಾರ, ಸತೀಶರೆಡ್ಡಿ ತಾಜಲಾಪುರ, ಚಂದ್ರಶೇಖರ ಗುತ್ತೇದಾರ, ಲಕ್ಷ್ಮಣ ಆವುಂಟಿ,ಸೂರ್ಯಕಾಂತ ಚಿಂಚೊಳಿ, ಕೆ.ಎಂ.ಬಾರಿ, ಅನ್ವರ ಖತೀಬ್, ಶಿವಕುಮಾರ ಪೋಚಾಲ, ಗೋಪಾಲ ಜಾಧವ, ಅಶೋಕ ಚವ್ಹಾಣ, ತುಕಾರಾಮ ಪವಾರ ಇದ್ದರು.

ಪಂಚಲಿಂಗೇಶ್ವರ ಬುಗ್ಗೆ ಟ್ರಸ್ಟ್ ವತಿಯಿಂದ ಶಾಸಕ ಅವಿನಾಶ ಜಾಧವ ಅವರಿಗೆ ಸನ್ಮಾನಿಸಿದರು.

ಕೊಳ್ಳೂರು: ತಾಲ್ಲೂಕಿನ ಕೊಳ್ಳೂರು ಗ್ರಾಮದ ಆರಾಧ್ಯ ದೇವ ಪಾರ್ವತಿ ಪರಮೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಮಂಗಳವಾರ ಅಚರಿಸಲಾಯಿತು.

ಕಲಬುರಗಿ ಜಿಲ್ಲೆಯ ಪ್ರಮುಖ ಶಿವ ಪಾರ್ವತಿಯ ಏಕೈಕ ದೇವಾಲಯ ಖ್ಯಾತಿಯ ಕೊಳ್ಳೂರು ಗ್ರಾಮದ ಶ್ರೀ ಪಾರ್ವತಿ ಪರಮೇಶ್ವರ ದೇವಾಲಯದಲ್ಲಿ ಅಭಿಷೇಕ, ಪೂಜೆ ಮಹಾ ಪ್ರಸಾದ ನಡೆಯಿತು. ಮಹಾಶಿವ ರಾತ್ರಿಯ ಉಪವಾಸ ಪ್ರಯುಕ್ತ ಭಕ್ತರು ದೇವರ ದರ್ಶನ ಪಡೆದ ನಂತರ ಉಪವಾಸಕ್ಕೆ ತೆರೆ ಎಳೆದರು.

ಶಿವರಾತ್ರಿ ಪ್ರಯುಕ್ತ ರಾತ್ರಿಪೂರ್ತಿ ಭಕ್ತರು ಜಾಗರಣೆಗಾಗಿ ಭಜನೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT