ನೈತಿಕ ಮೌಲ್ಯ ಬೆಳೆಸುವ ವಚನ ಸಾಹಿತ್ಯ

7
ವಿದ್ಯಾರ್ಥಿಗಳಿಗೆ ಶ್ರಾವಣ ಮಾಸದ ವಿಶೇಷ ಉಪನ್ಯಾಸ ಮಾಲೆ

ನೈತಿಕ ಮೌಲ್ಯ ಬೆಳೆಸುವ ವಚನ ಸಾಹಿತ್ಯ

Published:
Updated:
Deccan Herald

ಕಲಬುರ್ಗಿ: ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬೆಳೆಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ವಚನ ಸಾಹಿತ್ಯ ನೆರವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಕುಪೇಂದ್ರ ಪಾಟೀಲ ಹೇಳಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಂದ ಇಲ್ಲಿಯ ಎಂ.ಎಸ್‌. ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗಾಗಿ ಶ್ರಾವಣ ಮಾಸದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಸಿಗುತ್ತಿರುವ ಶಿಕ್ಷಣ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ. ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಗಳು ಹೆಣ್ಣು-ಹೊನ್ನು-ಮಣ್ಣಿಗಾಗಿಯೇ ನಡೆದಿದನ್ನು ನೋಡಿದ್ದೇವೆ. ಆದರೆ, ಶರಣರು ಇವೆಲ್ಲವುಗಳನ್ನು ಮೀರಿದ ಸಮಾನತೆಗಾಗಿ ಕ್ರಾಂತಿ ಮಾಡಿದ್ದು ವಿಶೇಷವಾಗಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಪ್ರೊ.ಚಿ.ಸಿ.ಲಿಂಗಣ್ಣ, ಬುದ್ಧ-ಬಸವ-ಅಂಬೇಡ್ಕರ್ ಅವರ ತತ್ವಗಳನ್ನು ಸರಿಯಾಗಿ ತಿಳಿದುಕೊಂಡು ಪಾಲಿಸಬೇಕು ಎಂದರು.
ಪ್ರಾಚಾರ್ಯ ಐ.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಾನಂದ ಮಠಪತಿ, ನಿವೃತ್ತ ಪ್ರಾಚಾರ್ಯ ಬಿ.ಎಂ.ಪೋಲೀಸ್ ಪಾಟೀಲ ಇದ್ದರು. ಉಪನ್ಯಾಸಕ ಡಾ.ಸೋಮಶೇಖರಯ್ಯ ವಿಶ್ವನಾಥಮಠ ನಿರೂಪಿಸಿದರು. ವಿಜಯಕುಮಾರ ತೇಗಲತಿಪ್ಪಿ ವಂದಿಸಿದರು.

ವಚನ ವೈಭವ: ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶರಣರ ಒಕ್ಕೂಟದಿಂದ ಇಲ್ಲಿಯ ಶಹಬಜಾರ ಜಿಡಿಎ ಆಟೊ ನಗರದಲ್ಲಿರುವ ಸಂಗಮನಾಥ ಎಸ್.ಪಾಟೀಲ ಅವರ ಮನೆಯಲ್ಲಿ ‘ಮಹಾ ಮನೆಯಲ್ಲಿ ವಚನ ವೈಭವ’ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಶರಣ ಸಾಹಿತಿ ಪ್ರೊ.ಕುಪೇಂದ್ರ ಪಾಟೀಲ, ಎಚ್.ಬಿ.ಪಾಟೀಲ, ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಸಂಗಮನಾಥ ಎಸ್.ಪಾಟೀಲ, ಬಸವರಾಜ ಶೇರಿಕಾರ, ರೇವಣಸಿದ್ಧಯ್ಯ ಸ್ವಾಮಿ, ಅಪ್ಪಾರಾವ ಪಾಟೀಲ, ಶಾಂತವೀರ ದಮ್ಮೂರ, ಸುರೇಶ ಕುಲಕರ್ಣಿ, ರವಿ ಅವಂಟಿ ಇದ್ದರು.

ಸಿದ್ಧರಾಮ ಯಳವಂತಗಿ ನಿರೂಪಿಸಿದರು. ನಾಗರಾಜ ಕಾಮಾ ಸ್ವಾಗತಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !