ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂದೋಲಾ ಶ್ರೀ ವಿರುದ್ಧ ಪ್ರತಿಭಟನೆ

Last Updated 22 ನವೆಂಬರ್ 2020, 13:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ಶ್ರೀರಾಮ ಸೇನಾದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಅವರನ್ನು ವಿನಾಕಾರಣ ಸ್ಥಾನದಿಂದ ವಜಾಗೊಳಿಸಿದ, ಶ್ರೀರಾಮ ಸೇನಾದ ರಾಜ್ಯ ಘಟಕದ ಅಧ್ಯಕ್ಷರೂ ಆದ ಆಂದೋಲಾ ಶ್ರೀಗಳ ಕ್ರಮ ಖಂಡನಾರ್ಹ’ ಎಂದು ಸೇನಾದ ಕೆಲ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಲಕ್ಷ್ಮಿಕಾಂತ ಗೆಳೆಯರ ಬಳಗದ ನೇತೃತ್ವದಲ್ಲಿ ನಗರದ ಸ್‌ವಿಪಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ‘ಆಂದೋಲಾ ಶ್ರೀ ಹಠಾವೋ, ಶ್ರೀರಾಮ ಸೇನಾ ಬಚಾವೊ’ ಘೋಷಣೆ ಕೂಗಿದರು.‌

‘ಲಕ್ಷ್ಮಿಕಾಂತ ಸ್ವಾದಿ ಅವರು ಐದು ವರ್ಷಗಳಿಂದ ಶ್ರೀರಾಮ ಸೇನೆ ಸಂಘಟಿಸಿದ್ದಾರೆ. ಹಳ್ಳಿಗಳಲ್ಲೂ ಘಟಕಗಳನ್ನು ಮಾಡಿದ್ದಾರೆ. ಕ್ರಿಯಾಶೀಲರಾಗಿ ಕೆಲಸ ಮಾಡಿದರೂ ಆಂದೋಲಾ ಮಠದ ಸಿದ್ಧಲಿಂಗ ಶ್ರೀಗಳು ಅವರನ್ನು ಹುದ್ದೆಯಿಂದ ವಜಾ ಮಾಡಿದ್ದಾರೆ. ಈ ಬಗ್ಗೆ ಒಂದು ಸಭೆಯನ್ನೂ ಕರೆಯದೇ, ಕಾರ್ಯಕರ್ತರ ಜೊತೆ ಚರ್ಚಿಸದೇ ದಿಢೀರ್‌ ನಿರ್ಧಾರ ಕೈಗೊಳ್ಳಲು ಕಾರಣವೇನು?’ ಎಂದೂ ಪ್ರಶ್ನಿಸಿದರು.

ಮುಖಂಡರಾದ ಸಂದೀಪ್ ಮಾನೆ, ದುರ್ಗಾ ಸೇನಾ ಜಿಲ್ಲಾ ಘಟಕದ ಅಧ್ಯಕ್ಷೆ ಶೀಲಾ ಮಂಗಳಮುಖಿ, ಮಡಿವಾಳ ಅಮರಾವತಿ, ಸಂಗು ಕಾಳನೂರ, ಶಿವು ಅವರಳ್ಳಿ, ಕೆದರ್ನಾಥ್ ಸ್ವಾಮಿ, ಅಶೋಕ ಚಂದನಕೆರೆ, ಶರಣು ಗಣಜಲಖೇಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT