ಕಲಬುರಗಿ: ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು ಶಾಸಕ ಬಿ.ಆರ್. ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಕಳಪೆ ಕಾಮಗಾರಿಯ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಅನುದಾನದ ಜೊತೆಗೆ ಬಿ.ಆರ್. ಪಾಟೀಲ ಅವರು ಸಮತಾ ಲೋಕ ಶಿಕ್ಷಣ ಟ್ರಸ್ಟ್ ಮೂಲಕ ಸ್ವಂತ ಹಿಟಾಚಿ ಯಂತ್ರಗಳನ್ನು ಖರೀದಿಸಿ ನಮ್ಮ ಹೊಲ, ನಮ್ಮ ರಸ್ತೆ ಯೋಜನೆಯಡಿ ರಸ್ತೆಗಳನ್ನು ನಿರ್ಮಿಸಿದ್ದಾರೆ ಎಂದು ಜಿ.ಪಂ. ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಅನುದಾನದಲ್ಲಿ ನಿರ್ವಹಿಸಿದ ಕಾಮಗಾರಿಗಳನ್ನು ಕಲಬುರಗಿ, ಬೀದರ್, ಯಾದಗಿರಿ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ಅವರು ತಮ್ಮ ಟ್ರಸ್ಟ್ನಿಂದ ಮಾಡಿದ್ದು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಸಮತಾ ಲೋಕ ಶಿಕ್ಷಣ ಟ್ರಸ್ಟ್ನಿಂದ ರೈತರ ಹೊಲಗಳಿಗೆ ರಸ್ತೆಗಳನ್ನು ನಿರ್ಮಿಸಲು ₹40 ಕೋಟಿ ಖರ್ಚು ಮಾಡಲಾಗಿದೆ. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡರೆ ತಪ್ಪೇನು’ ಎಂದು ಪ್ರಶ್ನಿಸಿದರು.

‘ಸರ್ಕಾರದಿಂದ ಅನುದಾನ ತಂದರೂ ಇನ್ನೂ ಹೆಚ್ಚು ರಸ್ತೆಗಳನ್ನು ನಿರ್ಮಿಸುವ ಉದ್ದೇಶದಿಂದ ಸಮತಾ ಟ್ರಸ್ಟ್ ರೈತರ ಕಷ್ಟಕ್ಕೆ ಸ್ಪಂದಿಸಲು ರಸ್ತೆಗಳನ್ನು ನಿರ್ಮಿಸುತ್ತಿದೆ. ಸರ್ಕಾರದ ಅನುದಾನದಲ್ಲಿ ನಡೆದ ಕಾಮಗಾರಿಯನ್ನು ಟ್ರಸ್ಟ್ನಿಂದ ಮಾಡಿದ್ದೇವೆ ಎಂದು ಯಾರೂ ಹೇಳಿಲ್ಲ. ಈ ವಿಚಾರದಲ್ಲಿ ಸುಭಾಷ್ ಗುತ್ತೇದಾರ ಅವರು ಕ್ಷೇತ್ರದ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ’ ಎಂದರು.

ಆರ್.ಕೆ.ಪಾಟೀಲ ಅವರು ಕಾಮಗಾರಿಗಳಿಗೆ ಚಾಲನೆ ನೀಡುವಾಗ ಹಾಜರಿದ್ದು, ಊರಿನ ರೈತರಿಂದ, ಪ್ರಮುಖರಿಂದ ಪೂಜೆ ಮಾಡಿಸಿದ್ದಾರೆಯೇ ಹೊರತು ಅವರೇ ಪೂಜೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿರುವ ಸುಭಾಷ್ ಗುತ್ತೇದಾರ ಅವರು ನರೇಗಾ ಯೋಜನೆಯಡಿ ಕ್ಷೇತ್ರದ ರೈತರ ಹೊಲಗಳಲ್ಲಿ 500 ಬಾವಿಗಳನ್ನು ನಿರ್ಮಿಸಲು ಮುಂದಾಗಿದ್ದರು. ಈ ಬಗ್ಗೆಯೂ ದೂರು ನೀಡಿ ಕೇಂದ್ರದಲ್ಲಿನ ತಮ್ಮ ಪಕ್ಷದ ಸರ್ಕಾರದ ಮೇಲೆ ಒತ್ತಡ ಹೇರಿ ನಿಲ್ಲಿಸಿದ್ದಾರೆ. ಆ ಮೂಲಕ ಅಭಿವೃದ್ಧಿ ವಿರೋಧಿ ಧೋರಣೆ ತಳೆದಿದ್ದಾರೆ ಎಂದರು.

ಮುಖಂಡರಾದ ಶಿವಪುತ್ರಪ್ಪ ಪಾಟೀಲ, ಅಶೋಕ ಸಾವಳೇಶ್ವರ, ಗುರುಲಿಂಗ ಜಂಗಮ ಪಾಟೀಲ, ಶರಣಬಸಪ್ಪ ಪಾಟೀಲ, ಚನ್ನಬಸಪ್ಪ ಪಾಟೀಲ, ಗುರುಶಾಂತ ಪಾಟೀಲ ನಿಂಬಾಳ, ಸತೀಶ್ ಕಡಗಂಚಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.