ಕಲಬುರಗಿ: ‘ಕುರ್ಚಿಗೆ ಕಂಟಕ ಬಂದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್, ಜನಿವಾರ, ಶಿವದಾರ ಎಂದೆಲ್ಲ ವಿಷಯ ಪ್ರಸ್ತಾಪಿಸಿ ಜನರ ಗಮನ ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಚಿತ್ರದುರ್ಗದ ಬಿಜೆಪಿ ಸಂಸದ ಗೋವಿಂದ ಕಾರಜೋಳ ಟೀಕಿಸಿದರು.

‘ಹಿಜಾಬ್, ಜನಿವಾರ, ಶಿವದಾರಗಳೆಲ್ಲವೂ ಇಂದು ನಿನ್ನೆಯದಲ್ಲ. ಇವೆಲ್ಲ ನಮ್ಮ ಸಂಸ್ಕೃತಿಯೊಂದಿಗೆ ಬಂದಂಥ ಆಚರಣೆಗಳು. ಮೇಲಾಗಿ ಸಮಾನತೆ ಇರಲಿ ಎಂಬ ಉದ್ದೇಶದಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಜಾರಿಗೊಳಿಸಲಾಗಿತ್ತು. ಅಂಥದ್ದರಲ್ಲಿ ಹಿಜಾಬ್, ಜನಿವಾರಗಳ ಬಗೆಗೆ ಆದೇಶ ಹೊರಡಿಸುವ ಅಗತ್ಯ ಇರಲಿಲ್ಲ’ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರ ಕುರ್ಚಿಗೆ ಯಾವಾಗೆಲ್ಲ ಕಂಟಕ ಬಂದಿದೆಯೋ ಆಗೆಲ್ಲ ಅವರು ಇಂಥ ಗಿಮಿಕ್ ಮಾಡುತ್ತಲೇ ಬಂದಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ಸಲ ಜಾತಿಗಣತಿ ಮಾಡಿಸುತ್ತಾರೆ. ಅದರ ವರದಿಯೇ ಹೊರಗೆ ಬರಲ್ಲ. ಅವರ 8 ವರ್ಷದ ಆಡಳಿತದಲ್ಲಿ ಇಂಥ ಗಿಮಿಕ್ ನಡೆಯುತ್ತಲೇ ಇವೆ’ ಎಂದು ವ್ಯಂಗ್ಯವಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-34-1786432130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.