ಸೇಡಂ (ಕಲಬುರಗಿ ಜಿಲ್ಲೆ): ‘ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ 20 ವರ್ಷದ ಹಿಂದೆ ಜಾರಿಗೆ ಬಂದಿದ್ದ ಮಹಾತ್ಮ ಗಾಂಧಿ ನರೇಗಾ ಕಾಯ್ದೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಕಾಯ್ದೆ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
.ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಅಶ್ವತ್ಥನಾರಾಯಣ .
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಕಾಯ್ದೆಯಲ್ಲಿ ಹೇಳಿದಂತೆ ಅನುದಾನವನ್ನು ಒದಗಿಸಲು ರಾಜ್ಯ ಸರ್ಕಾರಗಳಿಗೆ ಅಸಾಧ್ಯ. ರಾಜ್ಯದಲ್ಲಿ ಇದರ ವಿರುದ್ಧ ಕೋರ್ಟ್ಗೆ ಹೋಗಿ, ಕಾನೂನು ಸಮರ ನಡೆಸಲು ನಿರ್ಧರಿಸಿದ್ದೇವೆ. ಜೊತೆಗೆ ಎರಡು ದಿನಗಳ ವಿಶೇಷ ಅಧಿವೇಶನ ಕರೆದು, ಮಹಾತ್ಮ ಗಾಂಧಿ ನರೇಗಾ ಯೋಜನೆ ಏನಿತ್ತು? ಈಗಿನ ವಿಬಿ-ಜಿ- ರಾಮ್-ಜಿ ಯೋಜನೆ ಏನಿದೆ? ಎಂಬುದರ ಬಗೆಗೆ ವಿಸ್ತೃತ ಚರ್ಚಿಸಿ ಜನರ ಮುಂದೂಡಲು ತೀರ್ಮಾನಿಸಲಾಗಿದೆ’ ಎಂದರು.
.ಬೆಳಗಾವಿ: ವಿಬಿ–ಜಿ ರಾಮ್ ಜಿ ಕಾಯ್ದೆಗೆ ಕಾಂಗ್ರೆಸ್ ವಿರೋಧ.
‘ಹೊಸ ಮಸೂದೆಯಲ್ಲಿರುವ ರಾಮ ಶ್ರೀರಾಮ ಅಲ್ಲ, ದಶರಥ ರಾಮನ ಅಲ್ಲ, ಕೌಸಲ್ಯ ರಾಮನೂ ಅಲ್ಲ; ಬದಲಿಗೆ ನಾಥೂ ರಾಮ.ಇದರ ವಿರುದ್ದ ನಾವು ಹೋರಾಟ ರೂಪಿಸಲಿದ್ದೇವೆ. ನೀವೂ ಹೋರಾಟಕ್ಕೆ ಅಣಿಯಾಗಬೇಕು’ ಎಂದು ಕರೆ ನೀಡಿದರು.
.ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್ ಜಿ ಸಮರ್ಥಿಸಿದ ಪ್ರತಾಪ್ಸಿಂಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.