ಕಲಬುರಗಿ: ಹೋಳಿ ಹಾಗೂ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಸೋಲಾಪುರ ವಿಭಾಗದ ಮೂಲಕ ಸಂಚರಿಸುವ ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಲಾಗಿದೆ.

ಪ್ರತಿ ಶುಕ್ರವಾರ ಸಂಚರಿಸುವ ಸೋಲಾಪುರ-ಅನಕಪಲ್ಲಿ (01477) ಸಾಪ್ತಾಹಿಕ ವಿಶೇಷ ರೈಲು ಸಂಚಾರವನ್ನು ಜುಲೈ 10 ರವರೆಗೆ ಮುಂದುವರಿಸಲಾಗಿದೆ. ಈ ಹಿಂದೆ ಈ ರೈಲು ಫೆಬ್ರುವರಿ 27 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು ಎಂದು ಕೇಂದ್ರ ರೈಲ್ವೆ ವಲಯದ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಶನಿವಾರ ಸಂಚರಿಸುವ ಅನಕಪಲ್ಲಿ-ಸೋಲಾಪುರ (01478) ಸಾಪ್ತಾಹಿಕ ವಿಶೇಷ ರೈಲು ಸಂಚಾರವನ್ನು ಜುಲೈ 11 ರವರೆಗೆ ಮುಂದುವರಿಸಲಾಗಿದೆ. ಸೋಲಾಪುರ-ಕಲಬುರಗಿ (01465/01466) ಕಾಯ್ದಿರಿಸದ ದೈನಂದಿನ ವಿಶೇಷ ರೈಲು ಸಂಚಾರವನ್ನು ಜುಲೈ 15 ರವರೆಗೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.