ಮಂಗಳವಾರ, ನವೆಂಬರ್ 19, 2019
23 °C

ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿ

Published:
Updated:
Prajavani

ಕಲಬುರ್ಗಿ: ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಎಸ್‌ಎಸ್‌ಕೆ ಸಮುದಾಯದವರು ನಗರದಲ್ಲಿ ಭಾನುವಾರ ಮಹಾರಾಜರ ಭಾವಚಿತ್ರದ ಅದ್ಧೂರಿ ಮೆರವಣಿಗೆ ಜರುಗಿತು. 

ಜಯಂತಿ ಪ್ರಯುಕ್ತ ಶಹಾಬಜಾರ್‌ನ ಜಗದಂಬಾ ಮಂದಿರದಿಂದ ಆರಂಭವಾದ ಮೆರವಣಿಗೆ ಸೂಪರ್‌ ಮಾರ್ಕೆಟ್‌ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶ್ರೀರಾಮ ಪವಾರ, ಪ್ರಕಾಶ ಮೆಂಗಜಿ, ವಿಷ್ಣುಸಾ ಬಾರಾಡ, ಸುಭಾಷ್‌ ಕಮಲಾಪುರ, ರವೀಂದ್ರಕುಮಾರ ಮೆಂಗಜಿ, ಅನಿಲ್‌ ಮಿಸ್ಕಿನ್, ಡಾ.ಯಶವಂತರಾವ್‌ ಮೆಂಗಜಿ ಸೇರಿದಂತೆ ಸಮಾಜದ ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)