ಶನಿವಾರ, ಡಿಸೆಂಬರ್ 7, 2019
22 °C

ಎಸ್ಪಿ ಯಡಾ ಮಾರ್ಟಿನ್ ವರ್ಗಾವಣೆಗೆ ಹೈಕೋರ್ಟ್ ತಡೆಯಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರ ವರ್ಗಾವಣೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತೆ ತಡೆಯಾಜ್ಞೆ ನೀಡಿದ್ದು, ಎಸ್ಪಿಯಾಗಿ ಮುಂದುವರಿಯುವಂತೆ ಆದೇಶಿಸಿದೆ.

ಆಗಸ್ಟ್‌ನಲ್ಲಿ ಯಡಾ ಮಾರ್ಟಿನ್‌ ಅವರನ್ನು ವರ್ಗಾವಣೆಗೊಳಿಸಿ ಉತ್ತರ ಕನ್ನಡ ಎಸ್ಪಿಯಾಗಿದ್ದ ವಿನಾಯಕ ಪಾಟೀಲ ಅವರನ್ನು ನೇಮಕ ಮಾಡಿತ್ತು. ಯಡಾ ಮಾರ್ಟಿನ್‌ ಅಧಿಕಾರ ವಹಿಸಿಕೊಂಡು ಆರು ತಿಂಗಳಷ್ಟೇ ಅಗಿತ್ತು. ಹೀಗಾಗಿ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್‌.ನಾರಾಯಣಸ್ವಾಮಿ ಹಾಗೂ ಆರ್‌.ದೇವದಾಸ್‌ ಅವರಿದ್ದ ವಿಭಾಗೀಯ ಪೀಠವು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತು. 

ಪ್ರಕರಣದ ವಿಚಾರಣೆಯನ್ನು 19ಕ್ಕೆ ಮುಂದೂಡಿತು. ಯಡಾ ಮಾರ್ಟಿನ್‌ ಅವರನ್ನು ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಯಾವುದೇ ಹುದ್ದೆ ತೋರಿಸಿರಲಿಲ್ಲ. ಕೆಲ ದಿನಗಳ ಬಳಿಕ ಅವರನ್ನು ಸಿಐಡಿ ಎಸ್ಪಿಯಾಗಿ ವರ್ಗಾಯಿಸಲಾಗಿತ್ತು. 

ಹೈಕೋರ್ಟ್‌ ಆದೇಶದ ಮೇರೆಗೆ ಯಡಾ ಮಾರ್ಟಿನ್‌ ಇದೇ 16ರಂದು ಕಲಬುರ್ಗಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.

ಪ್ರತಿಕ್ರಿಯಿಸಿ (+)