‘ಒಳ ಮನಸ್ಸು ಹೇಳುವುದನ್ನು ಕೇಳಿ’

7

‘ಒಳ ಮನಸ್ಸು ಹೇಳುವುದನ್ನು ಕೇಳಿ’

Published:
Updated:
Deccan Herald

ಕಲಬುರ್ಗಿ: ‘ಹೊರ ಮನಸ್ಸು ಹೇಳುವುದನ್ನು ನಿರ್ಲಕ್ಷಿಸಿ, ಒಳ ಮನಸ್ಸು ಹೇಳಿದ್ದನ್ನು ಕೇಳುವುದಕ್ಕೆ ನಾವು ಸಿದ್ಧರಾಗಿರಬೇಕು’ ಎಂದು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಹೇಳಿದರು.

ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಬುಧವಾರ ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಅವರು ಮಾತನಾಡಿದರು.

‘ಪ್ರಸಕ್ತ ದಿನಗಳಲ್ಲಿ ಹಣ ಗಳಿಸುವುದೇ ಜೀವನದ ಗುರಿಯಾಗಿದೆ. ಆದರೆ, ಸರಳತೆಯನ್ನು ಅಳವಡಿಸಿಕೊಂಡು ಪೂರ್ವಜರು ಕೂಡಿಟ್ಟ ಹಣವನ್ನು ಉಳಿಸುವುದೇ ಇಂದಿನ ಕಾಲದ ತುರ್ತು ಅಗತ್ಯವಾಗಿದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಕನಸು ಕಾಣುವುದು ತಪ್ಪಲ್ಲ. ಆದರೆ, ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನಿಸಬೇಕು. ಅದಕ್ಕಾಗಿ ಬೇಕಾಗಿರುವುದು ಆತ್ಮಬಲ, ಅದನ್ನು ಅಂಗಡಿಯಿಂದ ಖರೀದಿಸಿ ತರಲು ಸಾಧ್ಯವಿಲ್ಲ. ಆದ್ದರಿಂದ ಆಶಾವಾದಿಗಳಾಗಿರುವುದು ಉತ್ತಮ’ ಎಂದು ಹೇಳಿದರು.

‘ನಕಾರಾತ್ಮಕ ಚಿಂತನೆಗಳನ್ನು ಆದಷ್ಟು ದೂರ ಮಾಡಬೇಕು. ಅವು ನಮ್ಮನ್ನು ಇನ್ನಷ್ಟು ಸಮಸ್ಯೆಗಳಿಗೆ ದೂಡುತ್ತವೆ. ಕೇಳುವ, ಬರೆಯುವ, ಆಲಿಸುವ ಗುಣಗಳನ್ನು ಬೆಳಸಿಕೊಂಡರೆ ಏಕಾಗ್ರತೆ ಲಭಿಸುತ್ತದೆ. ಇದು ಲಭಿಸುವುದರಿಂದ ಅಂದುಕೊಂಡಿದ್ದನ್ನು ಸರಳವಾಗಿ ಸಾಧಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಅಂಜಿಕೆಯೇ ಭಯದ ಮೂಲ. ಅದು ಕೀಳರಿಮೆಗೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದ ಜನರು ಜಾಣರಾಗಿರುತ್ತಾರೆ, ಆದರೆ ಕೀಳರಿಮೆ, ಭಯದ ಕಾರಣದಿಂದ ಸಂದರ್ಶನಗಳಲ್ಲಿ ಅನುತ್ತೀರ್ಣರಾಗುತ್ತಾರೆ. ದಕ್ಷಿಣ ಕರ್ನಾಟಕದವರು ಬುದ್ಧಿಶಕ್ತಿಯಲ್ಲಿ ಹಿಂದಿರುತ್ತಾರೆ. ಆದರೆ, ಧೈರ್ಯ, ಸಾಹಸ ಮಾಡಿ ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ’ ಎಂದು ನುಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಸಚಿವ ಡಾ. ಅನಿಲ್‌ಕುಮಾರ್ ಬಿಡವೆ, ಡಾ.ಶಿವದತ್ತ ಹೊನ್ನಳ್ಳಿ, ಡೀನ್ ಡಾ.ಲಿಂಗರಾಜ ಶಾಸ್ತ್ರು, ಡಾ.ಎಸ್.ಜಿ.ಡೊಳ್ಳೆಗೌಡರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !