ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: ಆ.28 ರಿಂದ ಆಧ್ಯಾತ್ಮಿಕ ಪ್ರವಚನ

Published 27 ಆಗಸ್ಟ್ 2024, 14:35 IST
Last Updated 27 ಆಗಸ್ಟ್ 2024, 14:35 IST
ಅಕ್ಷರ ಗಾತ್ರ

ಸೇಡಂ: ‘ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಆ.28 ರಿಂದ ಸೆ7 ರವರೆಗೆ ಶ್ರಾವಣ ಮಾಸದ ನಿಮಿತ್ತ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ ಎಂದು ಮಠದ ಟ್ರಸ್ಟ್ ಸದಸ್ಯ ನಾಗಯ್ಯಸ್ವಾಮಿ ಬೊಮ್ನಳ್ಳಿ ತಿಳಿಸಿದ್ದಾರೆ.

ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ಅವರಿಂದ ಪ್ರತಿನಿತ್ಯ ಸಂಜೆ 5 ಗಂಟೆಯಿಂದ 7.15 ನಿಮಿಷದವರೆಗೆ ಪ್ರವಚನ ನಡೆಯಲಿದೆ. ಕಲಾವಿದ ರತನ್ ಮಡಿವಾಳ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ನಿತ್ಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಸತ್ಕರಿಸಲಾಗುತ್ತದೆ. ಭಕ್ತಿ ಭಜನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಮಹಿಳಾ ಫೌಂಡೇಶನ್, ಅಕ್ಕನ ಬಳಗ ಸದ್ಭಕ್ತ ಮಂಡಳಿ ಸೇರಿದಂತೆ ಭಜನಾ ಮಂಡಳಿಗಳು ಸಹಕಾರ ನೀಡಲಿವೆ’ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಶಂಕ್ರಪ್ಪ ಮಾಸ್ತರ್ ಕೋಸಗಿ, ಜನಾರ್ಧನರೆಡ್ಡಿ ತುಳೇರ್, ಶಿವಶರಣಪ್ಪ ಚಂದನಕೇರಿ, ರವಿಕುಮಾರ ರಾಜಾಪುರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT