ಕಲಬುರಗಿ: ನಗರದ ಮಕ್ತಂಪುರದ ಹೋಳಿ ಕಟ್ಟೆಯ ಸಮೀಪದ ‘ಘಂಟೋಜಿ ಗೃಹ ಉದ್ಯೋಗ’ ನಡೆಸುವ ಜಿ+1 ಮನೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ.

ದುರಂತದಲ್ಲಿ ₹10 ಲಕ್ಷದಿಂದ ₹15 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ದಟ್ಟ ಹೊಗೆ ಆವರಿಸಿತ್ತು. ಗರ್ಭಿಣಿ ಸೇರಿದಂತೆ ಐವರು ಮನೆಯಲ್ಲಿದ್ದರು. ಕೂಡಲೇ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟೋತ್ತಿಗೆ ಬೆಂಕಿಯು ಇಡೀ ಮನೆ ಆವರಿಸಿದೆ.

ಬೆಂಕಿ ಅವಘಡದಲ್ಲಿ ಗೃಹ ಉದ್ಯಮಕ್ಕೆ ಬಳಸುತ್ತಿದ್ದ ಆಹಾರ ಧಾನ್ಯಗಳು, ಫ್ರಿಡ್ಜ್, ಟಿವಿ, ಬೆಡ್, ಮಂಚ, ಫ್ಯಾನ್, ಪೀಠೋಪಕರಣ ಸುಟ್ಟು ಕರಕಲಾಗಿವೆ. ಅಂದಾಜು ₹10 ಲಕ್ಷದಿಂದ ₹15 ಲಕ್ಷದ ತನಕ ಹಾನಿಯಾಗಿರುವ ಬಗೆಗೆ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮಧ್ಯಾಹ್ನ 12.30ರ ಹೊತ್ತಿಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆ 4 ಗಂಟೆ ತನಕ ಬೆಂಕಿಯನ್ನು ನಂದಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಮರಿಲಿಂಗಪ್ಪ ಹಾಗೂ ಸಿಬ್ಬಂದಿ ಇದ್ದ ತಂಡವು ಮೂರು ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಿತು.

‘ಮನೆಯ ಒಂದು ಕೊಠಡಿಯಲ್ಲಿ ಪಟಾಕಿಗಳೂ ಇದ್ದವು. ಆದರೆ, ಬರೀ ಎರಡು ಬಾಕ್ಸ್ಗಳಷ್ಟು ಪಟಾಕಿ ಸುಟ್ಟಿವೆ. ಮಿಕ್ಕಿರುವ ಎಲ್ಲ ಪಟಾಕಿ ಬಾಕ್ಸ್ಗಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಈ ಮನೆಯಲ್ಲಿ ದತ್ತಾತ್ರೇಯ ಘಂಟೋಜಿ, ಸತೀಶ ಘಂಟೋಜಿ, ಶ್ರೀನಿವಾಸ ಘಂಟೋಜಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.