ಕಲಬುರಗಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ–1 ಮಾರ್ಚ್ 18ರಿಂದ ಆರಂಭವಾಗಲಿದ್ದು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳ ಒಟ್ಟು 1,96,636 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಇದರಲ್ಲಿ 1,74,133 ರೆಗ್ಯುಲರ್ ವಿದ್ಯಾರ್ಥಿಗಳು, 21,331 ಪುನರಾವರ್ತಿತ ಹಾಗೂ 1,172 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಸೇರಿದ್ದಾರೆ. ಇದರಲ್ಲಿ ಖಾಸಗಿ ರೆಗ್ಯುಲರ್ ವಿದ್ಯಾರ್ಥಿಗಳ ಸಂಖ್ಯೆ ಸೇರಿಲ್ಲ.

ಕಲಬುರಗಿ ಜಿಲ್ಲೆಯಲ್ಲಿ ರೆಗ್ಯುಲರ್, ಪುನರಾವರ್ತಿತ ಹಾಗೂ ಖಾಸಗಿ ಪುನರಾವರ್ತಿತ ಸೇರಿದಂತೆ ಒಟ್ಟು 49,821 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದು ಏಳು ಜಿಲ್ಲೆಗಳ ಪೈಕಿ ಗರಿಷ್ಠ ನೋಂದಣಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 17,505 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದು ಕಲ್ಯಾಣ ಕರ್ನಾಟಕ ಭಾಗದಲ್ಲೆ ಕನಿಷ್ಠ ನೋಂದಣಿಯಾಗಿದೆ.

ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ 32,180, ಬೀದರ್ ಜಿಲ್ಲೆಯಲ್ಲಿ 29,186, ಕೊಪ್ಪಳ ಜಿಲ್ಲೆಯಲ್ಲಿ 24,634, ಬಳ್ಳಾರಿ ಜಿಲ್ಲೆಯಲ್ಲಿ 21,197 ಹಾಗೂ ವಿಜಯನಗರ ಜಿಲ್ಲೆಯಲ್ಲಿ 21,353 ವಿದ್ಯಾರ್ಥಿಗಳು ಪರೀಕ್ಷೆ–1ಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಫಲಿತಾಂಶ ಸುಧಾರಣೆಗೆ ಕಸರತ್ತು: ಕಲ್ಯಾಣ ಕರ್ನಾಟಕ ಭಾಗದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯು ಜೂನ್ನಿಂದಲೇ ಹಲವು ಕ್ರಮಗಳನ್ನು ಕೈಗೊಂಡಿದೆ.

ಫಲಿತಾಂಶ ಸುಧಾರಣೆಗಾಗಿ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಮುತುವರ್ಜಿ ವಹಿಸಿ ‘ಮಿಷನ್ 40+’ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ40ರಷ್ಟು ಅಂಕ ಪಡೆಯುವ ನಿರೀಕ್ಷೆಗಳಿವೆ. ಇದಲ್ಲದೇ ಪ್ರತಿ 15 ದಿನಗಳಿಗೊಮ್ಮೆ ಡಿಡಿಪಿಐಗಳ ಸಭೆ ನಡೆಸಿ, ನಿರಂತರವಾಗಿ ಪ್ರಗತಿಯ ಮೌಲ್ಯಮಾಪನ ನಡೆಸಿದ್ದಾರೆ. ಬಿಇಒಗಳು, ಮುಖ್ಯಶಿಕ್ಷಕರೂ ಸಾಕಷ್ಟು ಶ್ರಮಹಾಕಿದ್ದಾರೆ.

ಇದಲ್ಲದೇ ಶಿಕ್ಷಕರು ಮನೆ–ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳನ್ನು ನಸುಕಿನಲ್ಲಿ ಅಭ್ಯಾಸಕ್ಕೆ ಎಬ್ಬಿಸುವ ಪ್ರಯತ್ನಗಳು ನಡೆದಿವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲೆಯಲ್ಲೇ ಹೆಚ್ಚಿನ ಒತ್ತು ಕೊಟ್ಟು ಪಾಸಿಂಗ್ಗೆ ಬೇಕಾದ ಅಧ್ಯಯನ ಮಾಡಿಸಲಾಗಿದೆ. ಜಾಣ ವಿದ್ಯಾರ್ಥಿಗಳಿಗೂ ಆದ್ಯತೆ ಕೊಟ್ಟು ಒಂದಂಕವೂ ಕೈ ತಪ್ಪದಂತೆ ಶ್ರಮವಹಿಸಲಾಗುತ್ತಿದೆ. ವಿದ್ಯಾರ್ಥಿಗಳ ಪಾಲಕರಿಗೂ ಶಿಕ್ಷಣದ ಮಹತ್ವ ತಿಳಿಸಲಾಗಿದೆ. ಕಲಬುರಗಿ ಸೇರಿದಂತೆ ಹಲವೆಡೆ ಟಿ.ವಿಗಳನ್ನು ವೀಕ್ಷಣೆಯಿಂದ ದೂರ ಉಳಿಯುವಂತೆ ಮನವೊಲಿಸುವಂಥ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಮೂರು ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಅಂತಿಮ ಪರೀಕ್ಷೆಗೆ ಸನ್ನದ್ಧವಾಗಿದೆ.

ಕಳೆದ ಬಾರಿಯಂತೆ ಈ ವರ್ಷವೂ ಸಿ.ಸಿ. ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಕಲ್ಯಾಣ ಭಾಗದಲ್ಲಿ ಫಲಿತಾಂಶ ಸುಧಾರಣೆಗೆ ಪ್ರಮುಖವಾಗಿ ‘ಮಿಷನ್ 40+’ ಕಾರ್ಯಕ್ರಮ ನಡೆಸಲಾಗಿದೆ. ಇದರಿಂದ ಈ ಸಲ ಫಲಿತಾಂಶ ಸುಧಾರಣೆ ಕಾಣುವ ವಿಶ್ವಾಸವಿದೆ
–ಎನ್.ಎಚ್.ನಾಗೂರ, ಸಹ ನಿರ್ದೇಶಕ (ಪರೀಕ್ಷೆ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.