ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

7

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

Published:
Updated:
Prajavani

ಕಲಬುರ್ಗಿ: ನಗರದ ಇಂದಿರಾ ಸ್ಮಾರಕ ಭವನ (ಟೌನ್‌ಹಾಲ್‌) ದಲ್ಲಿ ಶುಕ್ರವಾರ ನಡೆಸ ಸಭೆಯಲ್ಲಿ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ರಮೇಶ ಟಿ.ಕಮಕನೂರ (ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ), ಮಹ್ಮದ್ ಅಜಮಲ್ ಗೋಳಾ (ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ), ರಾಜಕುಮಾರ ಎಚ್. ಕಪನೂರ (ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ) ಹಾಗೂ ಸಲೀಮ್ (ಆಡಳಿತ ಪಕ್ಷದ ನಾಯಕ) ಅವರನ್ನು ಆಯ್ಕೆ ಮಾಡಲಾಯಿತು.

ಮೇಯರ್ ಮಲ್ಲಮ್ಮ ವಳಕೇರಿ ಹಾಗೂ ಉಪ ಮೇಯರ್ ಆಲಿಯಾ ಸಿರಿನ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.

ಪಾಲಿಕೆ ಸದಸ್ಯರಾದ ಮಜರ್ ಆಲಂ ಖಾನ್, ಗಣೇಶ ವಳಕೇರಿ, ವಾಹೆದ್‍ಅಲಿ ಫಾತೆಖಾನ್, ಹುಲಿಗೆಪ್ಪ ಕನಕಗಿರಿ, ಮಹೇಶ ಹೊಸೂರಕರ್, ಜಾವಿದ್, ಅಶ್ಫಕ್ ಅಹ್ಮದ್ ಚುಲ್‌ಬುಲ್‌, ರಾಜಶ್ರೀ ರಾಜೇಶ್ರಿ ಜಾಧವ, ಈರಣ್ಣ ಹೊನ್ನಳ್ಳಿ, ಶಂಕರ ಸಿಂಗ್, ಈರಣ್ಣ ಝಳಕಿ, ಶಫಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !